ಈ ಮೂರಲ್ಲಿ ಸಂಶಯ ಪಡಬೇಡ
-ಅರ್ಧಾಗಿ, ಸ್ನೇಹಿತ, ಆಳು, ಪ್ರೀತಿ, ಸ್ನೇಹ,
ಈ ಮೂವರಿಗೆ ದಾರಿ ತೋರಿಸು
-ವಿಧವೆ, ಕುರುಡ, ಅನಾಥ
ಈ ಮೂರನ್ನು ಅವಶ್ಯ ಪಡೆ
-ಶಿಕ್ಷಣ, ಅನುಭವ, ಜ್ಞಾನ
ಈ ಮೂವರನ್ನು ಆದರದಿಂದ ಕಾಣು
-ತಂದೆ, ತಾಯಿ, ಗುರು
ಈ ಮೂವರನ್ನು ಸದಾ ಪ್ರೀತಿಸು
-ಹೆಂಡತಿ, ಸ್ನೇಹಿತ, ಪ್ರಾಣ
ಈ ಮೂವರನ್ನು ವಶದಲ್ಲಿಟ್ಟುಕೋ
-ಇಂದ್ರಿಯ, ಮನಸ್ಸು, ಕ್ರೋಧ
ಈ ಮೂವರು ಸದಾ ನಿನ್ನ ಜೊತೆಯಲ್ಲಿಟ್ಟುಕೋ
-ಪ್ರಾಮಾಣಿಕತೆ, ಪವಿತ್ರತೆ, ಸತ್ಯ
ಈ ಮೂವರನ್ನು ಹೊಂದಿಕೊಂಡು ನಡೆ
-ಮಳೆಗಾಲ, ಚಳಿಗಾಲ, ಬೇಸಿಗೆಕಾಲ
ಈ ಮೂರು ಜೀವನದಲ್ಲಿ ಹೇಳದೇ, ಕೇಳದೇ ಬರುವುದು
-ಜನನ, ಮರಣ, ರೋಗ
- ಸಿದ್ಧರಾಜು
* * *
No comments:
Post a Comment