Sunday, 27 November 2011

ಆತ್ಮೀಯತೆಯಿಂದ

ಎರಡು ಬೀಜಗಳು ಹೇಗೋ ಎಂತೋ ಸತ್ವಪೂರ್ಣ ಮಣ್ಣಿನಡಿ ಸೇರಿಹೋದವು.  ಕೆಲ ದಿನಗಳ ನಂತರ ಒಂದು ಬೀಜಕ್ಕೆ ಮೊಳೆಯುವ, ಬೆಳೆಯುವ ಇಚ್ಛೆಯಾಯಿತು. ಅದು ಎರಡನೆಯ ಬೀಜವನ್ನು ಕುರಿತು ಹೇಳಿತು. ನನಗೆ ಬೆಳೆಯಬೇಕೆನಿಸುತ್ತಿದೆ. ನನ್ನ ಬೇರುಗಳನ್ನು ಈ ಮಣ್ಣಿನಾಳಕ್ಕೆ ಇಳಿಸಿ, ನನ್ನ ಚಿಗುರುಗಳನ್ನು ಮಣ್ಣಿನಿಂದ ಮೇಲಕ್ಕೆ ಎತ್ತಿ ಕಳುಹಿಸಿ, ಆಹಾ! ನನ್ನ ಎಳೆಯ ಹಸಿರು-ಹಸಿರಾದ ಚಿಗುರುಗಳು ವಸಂತನ ಆಗಮನವನ್ನು ಸಾರುವ ಪತಾಕೆಗಳಂತೆ ಕಾಣುವುದು ಎಂಥಾ ಆಹ್ಲಾದಕರ ಅನುಭವ. ಸೂರ್ಯನ ಎಳೆಯ ಕಿರಣಗಳು ನನ್ನ ಮೇಲೆ ಮುದುಡಿ ಮಲಗಿರುವ ಇಬ್ಬನಿಯ ಹನಿಗಳನ್ನು ಮುತ್ತಿಡುವಾಗ ಆಗುವ ಸಂತೋಷಕ್ಕೆ ಸಾಟಿ ಇರದು.

ಕನ್ನಡ ಭಗವದ್ಗೀತೆ (ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗ ಶ್ರೇಣಿ)


ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು ?|
ಒರಟು ಕೆಲಸವೊ ಬದುಕು - ಮಂಕುತಿಮ್ಮ

Saying this didn’t work out right, this is not right, don’t
Spread thorns on your bed. What if something is
Missing, what if something else is in excess?
Life is rough work  – Dim tim

ಹೊನ್ನುಡಿ : ಅನುಭಾವಿಯ ಅನುಭವದೊಕ್ಕಣೆ - ವಚನಾಮೃತ


ನಿಜವಾದ ಲಕ್ಷ್ಮಿ ಸರಸ್ವತಿವೊಲಿದರೆ ಕುಲವನರಸಲದೇಕೆ
ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೇ
ಕಾಮಧೇನು ಮನೆಯಲಿರಲು ಬೇರೆಹಯನರಸಲೇಕೆ?
ಮೋಹವುಳ್ಳ ಠಾವಿಯಲ್ಲಿ ಲಜ್ಜೆಯನರಸಲದೇಕೆಯೇ
ಮಹಾದಾನಿ ಕೂಡಲ ಸಂಗಯ್ಯನೊಲಿದು
ಮಾದಾರ ಚೆನ್ನಯ ಮನೆಯಲುಂಡು
ವೇದವನೋದಿದವರು ಲಿಂಗದೇವನೊಲಿಸಿ ತೋರಿರೊ?
- ಬಸವಣ್ಣ

ಪ್ರತಿಭಾಭಿನಂದನೆ 2011


ಪರೀಕ್ಷೆ ಶಿಕ್ಷೆಯಲ್ಲ - ಮುಂದಡಿಯಿಡಲು ಶ್ರೀರಕ್ಷೆ ಎಂಬ ನಾಣ್ಣುಡಿಯಂತೆ ವೈದ್ಯಕೀಯ, ತಾಂತ್ರಿಕ ಪದವಿ ಪ್ರವೇಶ ಪರೀಕ್ಷೆಗಳ ಮತ್ತು ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಎಲ್ಲೆಡೆಯಿಂದಲೂ ಅಭಿನಂದನೆಗೆ ಭಾಜನರಾಗುತ್ತಾರೆ.

ಮೂರರ ಶ್ರೇಷ್ಠತೆ


ಈ ಮೂರಲ್ಲಿ ಸಂಶಯ ಪಡಬೇಡ
     -ಅರ್ಧಾಗಿ, ಸ್ನೇಹಿತ, ಆಳು, ಪ್ರೀತಿ, ಸ್ನೇಹ,
ಈ ಮೂವರಿಗೆ ದಾರಿ ತೋರಿಸು
     -ವಿಧವೆ, ಕುರುಡ, ಅನಾಥ
ಈ ಮೂರನ್ನು ಅವಶ್ಯ ಪಡೆ

BASE@Home


ಬೇಸ್ ಆರಂಭದಿಂದಲೂ ಮೌಖಿಕ ತರಬೇತಿ ಅಂದರೆ ನೇರ ತರಗತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದರೂ ವಿದ್ಯಾರ್ಥಿಗಳ ಮತ್ತು ಪೋಷಕರ ಒತ್ತಾಸೆಯ ಮೇರೆಗೆ ದೂರಶಿಕ್ಷಣವನ್ನು ಆರಂಭಿಸಿತು. ಸುಮಾರು 15 ವರ್ಷಗಳ ಕಾಲ ಇದೇ ಪದ್ಧತಿಯನ್ನು ನಿರಂತರವಾಗಿ ಅನುಸರಿಸಿತು.

ಸ್ವಾತಂತ್ರೋತ್ಸವ 2011


ಪ್ರತಿಸಲದಂತೆ ಈ ಸಲವೂ ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ತತ್ಪ್ರಯುಕ್ತ ಧ್ವಜವಂದನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನವನ್ನು ಸಲ್ಲಿಸಲಾಯಿತು. ಸರಿಯಾಗಿ 8:30ಕ್ಕೆ ಪುಟ್ಟಪುಟ್ಟ ಮಕ್ಕಳಿಂದ ಧ್ವಜಾರೋಹಣವೇರ್ಪಟ್ಟಿತು. ರಾಷ್ಟ್ರಗೀತೆ ಮತ್ತು ದೇಶಗೀತೆ 'ವಂದೇ ಮಾತರಂ' ಎಲ್ಲರೂ ಒಟ್ಟಾಗಿ ಹಾಡುವುದರೊಂದಿಗೆ ಸಾಂಪ್ರದಾಯಿಕ ಕಾರ್ಯಕ್ರಮ ಪ್ರಾರಂಭವಾಯಿತು.

ಶರನ್ನವರಾತ್ರಿ - ಆಯುಧಪೂಜಾ


ಶರದ್ರುತುರಾಜನು ಬಂತೆಂದರೆ ದೇಶದೆಲ್ಲಡೆ ನವರಾತ್ರಿ-ದಸರೆಯ ಸಡಗರವೋ ಸಡಗರ. ಇದು ಭೂಮಿಯ ಹಬ್ಬ. ಯುಗಾದಿಯು ಕಲಿಯುಗದ ಆದಿಯಾದರೆ, ನವರಾತ್ರಿ ಈ ಧರೆಯ ಆದಿಯೆಂದು ಪ್ರತೀತಿ ಇದೆ. ಅಂತಹ ನವರಾತ್ರಿಯಲ್ಲಿ ಆಯುಧಪೂಜೆಗೆ ಹೆಚ್ಚು ಪ್ರಾಶಸ್ತ್ಯ. ಇದು ಯಾವುದೇ ವರ್ಗಕ್ಕೆ, ಕುಟುಂಬಕ್ಕೆ ಸೀಮಿತವಾಗಿರದೆ ಎಲ್ಲರೂ ತಾವು ನಿತ್ಯವೂ ಬಳಸುವ ಆಯುಧಗಳಿಗೆ ಪೂಜಿಸುವ ಹಬ್ಬ. ಯಂತ್ರೋಪಕರಣಗಳು, ವಿದ್ಯುನ್ಮಾನ ಸಲಕರಣೆಗಳು, ನಿತ್ಯವೂ ಬಳಸುವ ಆಯುಧಗಳು, ವಾಹನಗಳು ಇತ್ಯಾದಿ ಹೀಗೆ ಹತ್ತು ಹಲವು ಬಗೆಬಗೆ ಆಯುಧಗಳನ್ನು ಶುಭ್ರಗೊಳಿಸಿ ಭಕ್ತಿಯಿಂದ ಎಲ್ಲವೂ ಶುಭವಿದ್ದು ಮುಂದೆಯೂ ಸುಖತರಲೆಂದು ಪ್ರಾರ್ಥಿಸುವ ಹಬ್ಬ.

ಪ್ರಥಮ ಬಹುಮಾನಿತ ಲೇಖನ

: ಉದ್ಯೋಗಸ್ಥ ಪುರುಷ :
ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿನ ಪಾತ್ರ

ಯಾವುದೇ ಕುಟುಂಬದಲ್ಲಿ ಮಕ್ಕಳ ಪಾಲನೆ ಪೋಷಣೆಯ ಮಹತ್ತರವಾದ ಜವಾಬ್ದಾರಿ ಆ ಮಕ್ಕಳ ಪೋಷಕರದ್ದು. ಪೋಷಕರು ಎಂದೊಡನೆ ತಂದೆ ತಾಯಿ ಇಬ್ಬರೂ ಒಳಗೊಂಡಿರುತ್ತಾರೆ. ಹಿಂದಿನ ಕಾಲದಲ್ಲಾದರೆ, ತಾಯಿಯಾದವಳು ಸಾಮಾನ್ಯವಾಗಿ ಮನೆಯಲ್ಲೇ ಇರುತ್ತಿದ್ದರಿಂದ ಮತ್ತು ಕುಟುಂಬದ ಹಿರಿಯರ ಸಹಾಯದಿಂದ ಚಿಕ್ಕ ಮಕ್ಕಳ ಪಾಲನೆ ಪೋಷಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಳು. ತಂದೆಯಾದವನು ಬಿಡುವಿನ ವೇಳೆಯಲ್ಲಿ ತನ್ನ ಮಕ್ಕಳ ಯೋಗಕ್ಷೇಮದ ಬಗ್ಗೆ, ಅವರ ಆಟಪಾಠಗಳ ಬಗ್ಗೆ ಹಿತ ಚಿಂತನೆ ಮಾಡುತ್ತಿದ್ದರೆ ಸಾಕಿತ್ತು. ಹಾಗಿದ್ದ ಪಕ್ಷದಲ್ಲೂ ಅಂದಿನ ದಿನಗಳಲ್ಲಿ ತಂದೆಯಾದವನು ತನ್ನ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ಜವಾಬ್ದಾರಿ ತೋರಿಸುತ್ತಿದ್ದನು.

ಮಾಸದ ವ್ಯಕ್ತಿ


ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ

ಕನ್ನಡದ ಸುಪ್ರಸಿದ್ಧ ಹಾಗೂ ಜನಪ್ರಿಯ ಕವಿಗಳಲ್ಲಿ ಒಬ್ಬರಾಗಿ, ಆಡಳಿತಾತ್ಮಕ ದಕ್ಷತೆ ಮತ್ತು ದೂರದೃಷ್ಟಿ ಹಾಗೂ ಸಾಹಿತ್ಯಕ ಸೃಜನಶೀಲತೆ ಮತ್ತು ಸಹೃದಯತೆಯ ಸಂಗಮವಾಗಿರುವ, ಕಾವ್ಯೋಪಾಸನೆಯ ವ್ರತಸ್ಥ ಚೇತನ; ಯುವ ಮನಸ್ಸಿನ ಕುತೂಹಲ ಮತ್ತು ಅನ್ವೇಷಣಗಳು ಸೌಂದರ್ಯನಿಷ್ಠ ಸ್ಪಂದನಗಳೊಂದಿಗೆ ಚಿಂತನಶೀಲ ವಿವೇಚನಾ ಶಕ್ತಿಯನ್ನು ಮೈಗೂಡಿಸಿಕೊಂಡು, ಪ್ರಕೃತಿ ಪ್ರೇಮವನ್ನೂ ಜಾಗೃತವಾಗಿರಿಸಿಕೊಂಡು ಬದುಕಿನ ವಿವಿಧ ಸ್ತರಗಳನ್ನು ಅವಲೋಕಿಸುತ್ತ ಹಾಗೂ ಅನುಭವಿಸುತ್ತ ಕಾವ್ಯಶಿಲ್ಪದಲ್ಲಿ ಒಂದು ಪರಿಣಿತಿಯ ಹಂತಕ್ಕೆ ಬಂದ, ಯುಗಯುಗಾಂತ್ಯದವರೆಗೆ ಜಗವ ಬೆಳಗಿಸಬಲ್ಲ ಚಿರಂತನ ಚೆನ್ ಬೆಳಕನ್ನು ಕಂಡ ಕವಿ ಶ್ರೀ ಚೆನ್ನವೀರಕಣವಿ

1928 ಜೂನ್ 28 ರಂದು ಗದಗಿನ ಹೊಂಬಳದಲ್ಲಿ ಪಾರ್ವತಮ್ಮ ಮತ್ತು ಸಕ್ರೆಪ್ಪನವರ ಕಿರಿಯ ಮಗನಾಗಿ ಕಣವಿಯವರ ಜನನ. ಕಿರಿಯ ಮಗನಾಗಿ ಜನಿಸಿದ ಇವರಿಗೆ ಇಟ್ಟ ಹೆಸರು 'ಚೆನ್ನವೀರ' ಎಂಬುದು. ಇದು ಸಕ್ರೆಪ್ಪ ಮಾಸ್ತರರ ದೀಕ್ಷಾಗುರುಗಳ ಹೆಸರು. ಕಣವಿಯವರ ತಂದೆ ಸಕ್ರೆಪ್ಪನವರು ಶಿರುಂದದಲ್ಲಿ ಶಾಲಾ ಶಿಕ್ಷಕರಾಗಿದ್ದರು. ಆ ಕಾಲದಲ್ಲಿ ಅದು ಅತ್ಯಂತ ಗೌರವಾನ್ವಿತವಾದ ವೃತ್ತಿ. ಕಣವಿ ಸಕ್ರೆಪ್ಪ ಮಾಸ್ತರರು ಪ್ರಭಾವೀ ಶಿಕ್ಷಕರು. ಜೊತೆಗೆ ಧ್ಯಾನ, ಪ್ರಾರ್ಥನೆಗಳಂಥ ಆಧ್ಯಾತ್ಮಿಕ ಸಾಧನೆಯಲ್ಲಿಯೂ ಅವರು ತೊಡಗಿದವರು. ಕಣವಿಯವರು ತಮ್ಮ ಶೈಶವ ಮತ್ತು ಬಾಲ್ಯಗಳನ್ನು ಕಳೆದದ್ದು ಶಿರುಂದದಲ್ಲಿ; ಅದು ಒಂದು ಸಣ್ಣಹಳ್ಳಿ. ಓರಗೆಯ ಬಾಲಕರೊಂದಿಗೆ ಬೆರೆತು ಗುಂಡು, ಚೆಂಡು, ಬುಗುರಿ  ಮೊದಲಾದ ಆಟಗಳನ್ನು ಆಡುತ್ತಿದ್ದ ಕಣವಿಯವರಿಗೆ ಅಲ್ಲಿಯ ಪರಿಸರ ಕುತೂಹಲವನ್ನು ಕೆರಳಿಸುತ್ತ, ಮನಸ್ಸನ್ನು ಉಲ್ಲಸಿತಗೊಳಿಸುತ್ತ, ಅವರ ಸೃಜನಶೀಲ ಶಕ್ತಿಯನ್ನು  ಜಾಗೃತಗೊಳಿಸುತ್ತ, ವಿಲಕ್ಷಣವಾದ  ಹೊಳಹುಗಳನ್ನು ಒಳಗೊಳಗೆ ಮೂಡಿಸುತ್ತ ಬೆಳಿಸಿತು. ಕಮ್ಮಾರ ಮಾನಪ್ಪನ ಕೆಂಗುಲಿಮೆ, ಕುಂಬಾರ ಮಲ್ಲಣ್ಣನ ತಿಗುರಿ ಅವರನ್ನು ಬೆರಗುಗೊಳಿಸುತ್ತಲೇ, ಹೊಸ ಸೃಷ್ಟಿಯ ಕ್ರಿಯಾತ್ಮಕ ಸಂವೇದನೆಗಳನ್ನು ನೀಡಿವೆ. ಕಣವಿಯವರು ಈ ಬಾಲ್ಯದ ದಿನಗಳಲ್ಲಿಯೇ ಆಟ, ಬಯಲಾಟ ಕಂಡಿದ್ದಾರೆ, ಕೋಲುಕುಣಿತ ನೋಡಿದ್ದಾರೆ. ಹಂತಿ (ಧಾನ್ಯಗಳನ್ನು ಒಕ್ಕುವಾಗ ಕಟ್ಟುವ ದನಗಳ ಸಾಲು)  ತಿರುಗುವುದನ್ನು

Out2Learn outbound camp for Teachers’

As the saying goes “Between the dawn and dusk, what remains is the beautiful fun filled memories, as days passes, we live with these memories and enjoy”. September 16, 2011 was one such memorable day.

ಶ್ರೀ ಕೃಷ್ಣ ಭಗದ್ಗೀತಾಮೃತ


ಅಧ್ಯಾಯ 12 : ಭಕ್ತಿಯೋಗ

ಶ್ರೀಕೃಷ್ಣ ಪರಮಾತ್ಮನಿಂದ ತೋರಿಸಲ್ಪಟ್ಟ ವಿಶ್ವರೂಪ ಸಮ್ಯಕ್ ದರ್ಶನದಿಂದ ಧನ್ಯನಾದ ಅರ್ಜುನನು ಶ್ರೀಕೃಷ್ಣನನ್ನು ಕುರಿತು ಯೋಗಾಭ್ಯಾಸ ಮಾಡುವವರಲ್ಲಿ ನಿನ್ನನ್ನು ವಿಶ್ವರೂಪನೆಂತಲೂ, ಅವ್ಯಕ್ತನೆಂತಲೂ ತಿಳಿದು ಪೂಜಿಸುವವರಿದ್ದಾರೆ. ಅವರಲ್ಲಿ ಯಾರಿಗೆ ಯೋಗ ಸಾಧನೆಯಾಗುವುದೋ ತಿಳಿಸು ಎಂದನು.

ಶ್ರೀಕೃಷ್ಣನು ಅರ್ಜುನಾ,

ಗರಡಿ ದಿಮ್ರಂಗಣ್ಣ

ಗರಡಿ ದಿಮ್ಮ ರಂಗಣ್ಣನ ಹತ್ತು ವರ್ಷದ ಮಗ ಆ ಸಂಜೆ ಮನೆಗೆ ಬಂದಾಗ ಬಲಗಣ್ಣು ನೀಲಿಗಟ್ಟಿತ್ತು. ಎಡತೋಳು ಜೋಲು ಬಿದ್ದಿತ್ತು. ಬಲಗಾಲು ಕುಂಟುತ್ತಿದ್ದ; ಮೂಗಿನಲ್ಲಿ ರಕ್ತ ಸುರಿದು ತುಟಿಮೇಲೆ ಹೆಪ್ಪುಗಟ್ಟಿದ ಗುರ್ತಿತ್ತು. 

ಸಸ್ಯ ಕೌತುಕ


ಈ ಜಗತ್ತಿನಲ್ಲಿ ಯಾವುದು ಕೌತುಕ? ಯಾವುದು ಕೌತುಕವಲ್ಲ? ಒಂದು ದೃಷ್ಟಿಯಲ್ಲಿ ಪ್ರತಿನಿತ್ಯದ ಹಗಲು ರಾತ್ರಿಗಳು, ವಾಷರ್ಿಕ ಋತುಕಾಲ ಚಕ್ರಗಳು, ಬ್ರಹ್ಮಾಂಡದಲ್ಲಿ ಧೂಳಿನ ಕಣದಂತೆ ವ್ಯಾಪಿಸಿದ ನಕ್ಷತ್ರಗಳು, ಭೂಮಿಯಲ್ಲಿ ವ್ಯಾಪಿಸಿದ ಅಪಾರ ವೈವಿಧ್ಯದ ಜೀವಸಂಕುಲ, ಬೆಳಕು ಶಕ್ತಿಯನ್ನು ಆಹಾರವಾಗಿ ಪರಿವತರ್ಿಸುವ ಸಸ್ಯ ಜಗತ್ತು, ಸೂಕ್ಷ್ಮ ಜೀವಕೋಶಗಳಲ್ಲಿರುವ ಸುಸಂಬದ್ಧ ಕಾರ್ಯ ವ್ಯವಸ್ಥೆ, ಬೀಜವೊಂದು ಹೆಮ್ಮರವಾಗಿ ಬೆಳೆಯುವ ಪ್ರಕ್ರಿಯೆ, ಭೋರ್ಗರೆದು ಹರಿವ ನೀರು ವಿದ್ಯುಚ್ಛಕ್ತಿಯಾಗಿ ನಮ್ಮ ಮನೆಗಳಿಗೆ ಹರಿದು ಬೆಳಕು, ಗಾಳಿ ನೀಡಿ, ಸಂಗೀತ ನುಡಿಸುವುದು........ ಹೀಗೆ ಇನ್ನೆಷ್ಟೋ ನಮ್ಮ ನಿತ್ಯ ಜೀವನದ ಘಟನಾವಳಿಗಳು ಕೌತುಕಮಯವೇ ಆಗಿವೆ. ಆದರೆ ಇವೆಲ್ಲವೂ ನಿತ್ಯ ಜೀವನದ ಕ್ರಿಯೆಗಳಾಗಿ ನಮಗೆ ಅಷ್ಟಾಗಿ ಕೌತುಕಗಳೆಂದು ಕಾಣದೇ ಹೋಗಬಹುದು. ಆದುದರಿಂದ ಕೆಲವು ಅಪರೂಪದ ವಿಚಾರಗಳಷ್ಟೇ ನಮಗೆ ಕೌತುಕವೆನಿಸುತ್ತವೆ. ಈ ದೃಷ್ಟಿಯಲ್ಲಿ ಸಸ್ಯ ಲೋಕದಲ್ಲಿ ಗುರುತಿಸಬಹುದಾದ ಕೆಲವು ವಿಶೇಷಗಳನ್ನು ಈ ಮುಂದೆ ತಿಳಿಸಲು ಪ್ರಯತ್ನಿಸಲಾಗಿದೆ.

ಆಫ್ರಿಕಾದ ಕಾಡುಗಳಲ್ಲಿ ಮನುಷ್ಯರನ್ನು ನುಂಗಿ ಹಾಕುವ ಮರಗಳಿವೆಯೇ? ನಡೆದುಕೊಂಡು ಹೋಗುವ ಮರಗಳಿವೆಯೇ? ಸತ್ತವರನ್ನು ಬದುಕಿಸಬಲ್ಲ ಸಸ್ಯಗಳಿವೆಯೇ? ಕೇರಳದ ಕಾಡುಗಳಲ್ಲಿ ದಾರಿ ತಪ್ಪಿಸುವ ಸಸ್ಯಗಳಿವೆಯೇ?..... ಇಂತಹ ಹಲವಾರು ಪ್ರಶ್ನೆಗಳನ್ನು ಕೆಲವರು ನನ್ನಲ್ಲಿ ಕೇಳಿದ್ದಾರೆ. ಆದರೆ ಇವೆಲ್ಲ ಸತ್ಯಕ್ಕೆ ದೂರವಾದ ಅತಿರಂಜಿತ ಕಟ್ಟುಕತೆಗಳು. ಆದರೆ ಕೀಟಗಳನ್ನು ಸೆರೆಹಿಡಿದು ಜೀಣರ್ಿಸುವ ಸಸ್ಯಗಳು, ಮುಟ್ಟಿದರೆ ಜ್ವರ ಬರಿಸುವ ಮರ, ಗಿಡವೊಂದರ ರಸವನ್ನು ಕುಡಿದರೆ ಹೊಸ ಚೈತನ್ಯ - ಇವೆಲ್ಲವೂ ಸತ್ಯ ವಿಚಾರಗಳೇ...

ಇಂತಹ ವಸ್ತುಸ್ಥಿತಿಯಲ್ಲಿ, ಮೇಲ್ಮೋಟಕ್ಕೆ ಹೆಚ್ಚಿನವರಲ್ಲಿ ಆಶ್ಚರ್ಯವನ್ನು ಹುಟ್ಟಿಸಬಲ್ಲ ಕೆಲವು ಸಸ್ಯಗಳನ್ನು ಆಯ್ದುಕೊಂಡು ಈ ಲೇಖನಮಾಲೆ ಸಿದ್ಧಪಡಿಸಲಾಗಿದೆ. ಇನ್ನು ಸಸ್ಯ ಕೌತುಕಗಳು ಎಂದರೆ ಇವು ಹಲವಾರು ರೀತಿಯಲ್ಲಿರಬಹುದು. ಕೆಲವು ಗಾತ್ರದಲ್ಲಿ, ರಚನೆ, ಜೀವನ ಶೈಲಿಯಲ್ಲಿ ಕೌತುಕ ತಂದರೆ ಇನ್ನು ಕೆಲವು ವಿರಳತೆ, ವರ್ತನೆ, ಸಂಖ್ಯೆ, ಪೋಷಣೆಗಳಲ್ಲಿ ಕೌತುಕ ತರಬಹುದು ಮತ್ತೆ ಕೆಲವಲ್ಲಿ ಹೊಂದಾಣಿಕಾ ಕೌತುಕಗಳಿದ್ದರೆ ಇನ್ನು ಕೆಲವಲ್ಲಿ ಅಪೂರ್ವ ಸಂಬಂಧ ಕೌತುಕಗಳು. ಅತಿ ದೊಡ್ಡ ವೃಕ್ಷ, ಅತಿ ಚಿಕ್ಕ ಸಸ್ಯ, ಅತಿ ದೊಡ್ಡ ಪುಷ್ಪ, ಅತಿ ಹಳೆಯ ಮರ... ಇಂತಹ ವಿಚಾರಗಳಿಗೆ ಮುಂದೆ ಓದಿ.

ಅತ್ಯಂತ ಎತ್ತರದ ವೃಕ್ಷಗಳು
ನಗ್ನಬೀಜ ಸಸ್ಯ ಗುಂಪಿಗೆ ಸೇರಿದ ಸೆಕೋಯಾ, ಸೆಕೋಯಾ ಡೆಂಡ್ರಾನ್ ಜಾತಿಯ ವೃಕ್ಷಗಳು ಅತಿ ಎತ್ತರಕ್ಕೆ ಬೆಳೆಯುವುವು. ಸೆಕೋಯಾಡೆಂಡ್ರಾನ್ ಗೈಗಾಂಟಿಯಮ್ 112 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ - ಎಂದರೆ ಸುಮಾರು 36 ಅಂತಸ್ತುಗಳ ಕಟ್ಟಡದ ಎತ್ತರ. ಈ ಮರದ ಬುಡದ ಸುತ್ತಳತೆ 31.4 ಮೀಟರ್. ಮರದ ಬುಡದಲ್ಲಿ ತೂತುಕೊರೆದು, ಇದರೊಳಗೆ ಎದುರು ಬದರು ವಾಹನ ಚಾಲನೆ ಸಾಧ್ಯವಾಗಿದೆ. ಇಂತಹ ತೂತಿನೊಳಗೆ ಸುಮಾರು ಇಪ್ಪತ್ತು ಜನರು ಸಾಲಾಗಿ ನಿಲ್ಲಬಹುದು. ಒಂದು ಮರದ ತೂಕ ಸುಮಾರು 1500 ಟನ್ಗಳು. ಕ್ಯಾಲಿಫೋನರ್ಿಯಾದಲ್ಲಿ ಬೆಳೆಯುವ ಈ ಮರಗಳಲ್ಲಿ ಕೆಲವು 2,200 ವರ್ಷಕ್ಕೂ ಹಳೆಯವು.

ಆಸ್ಟ್ರೇಲಿಯಾದ ಯಾಕಲಿಪ್ಟಸ್ ಜಾತಿಯ ಕೆಲವು ಮರಗಳೂ ಕೂಡಾ ಆಶ್ಚರ್ಯ ಹುಟ್ಟಿಸುವ ಎತ್ತರಕ್ಕೆ ಬೆಳೆಯುತ್ತದೆ. ಯುಕಲಿಪ್ಟಸ್ ರೆಗ್ನನನ್ಸ್ 114 ಮೀಟರ್ ಎತ್ತರ ಬೆಳೆದು ದಾಖಲೆ ಸ್ಥಾಪಿಸಿದೆ.

ಐದು ಸಹಸ್ರ ವರ್ಷಗಳ ಮರ
ಬ್ರಿಸ್ಟಲ್ಕೋನ್ ಪೈನ್ (ಪೈನಸ್ ಅರಿಸ್ಟೇಟಾ) ಎಂಬ ನಗ್ನ ಬೀಜದ ಪೈನ್ ವೃಕ್ಷಗಳು ಅಮೇರಿಕೆಯ ನಿವೇಡಾ ಪರ್ವತಗಳಲ್ಲಿ ಬೆಳೆಯುತ್ತಿವೆ. ಇವು ಜಗತ್ತಿನಲ್ಲಿಯೇ ಅತಿ ಹೆಚ್ಚು ಪ್ರಾಯದ ಮರಗಳು. ಇವುಗಳ ಪ್ರಾಯ ಸುಮಾರು 4,900 ವರ್ಷಗಳು. ಅದೆಷ್ಟು ರಾತ್ರಿ, ಹಗಲು, ಮಳೆ, ಬಿಸಿಲು, ಗಾಳಿಗಳಿಗೆ ಈ ವೃಕ್ಷಗಳು ಮೂಕಸಾಕ್ಷಿಗಳು!!  ನ್ಯೂ ಇಂಗ್ಲೆಂಡಿನಲ್ಲಿರುವ ಹಾಥರ್ಾನ್ ಬುಷ್ ಎಂಬ ಗಿಡಗಳು ಬ್ರಿಸ್ಟಲ್ಕೋನ್ ಪೈನ್ಗಳಿಗಿಂತಲೂ ಮುದಿಯವಂತೆ! ಈ ಗಿಡಗಳ ಪ್ರಾಯ 10,000 ವರ್ಷಗಳು ಎಂಬ ಉಲ್ಲೇಖವಿದೆ.

ಚಿರಾಯು ಪತ್ರಗಳ ವೆಲ್ವಿಶ್ಚಿಯಾ
1860ರಲ್ಲಿ ವೆಲ್ವಿಶ್ಚ್ ಎಂಬವರಿಂದ ಪತ್ತೆಯಾದ ವೆಲ್ವಿಶ್ವಿಯಾ ಮಿರಾಬಿಲಿಸ್ ಎಂಬ ಸಸ್ಯ ದಕ್ಷಿಣ ಆಫ್ರಿಕಾದ ಕಲಹರಿ ಮರುಭೂಮಿಯಲ್ಲಿ ಮಾತ್ರ ಕಂಡು ಬರುವ ಸಸ್ಯ ವಿಶೇಷ. ವಿನಾಶದ ಅಂಚಿನಲ್ಲಿರುವ ಈ ಸಸ್ಯದ ಕೆಲವೇ ಪ್ರತಿನಿಧಿಗಳು ಈಗ ಅಲ್ಲಿ ಬೆಳೆಯುತ್ತಿವೆ. ಅನಾವೃತ ಬೀಜ ಸಸ್ಯ ವರ್ಗಕ್ಕೆ ಸೇರಿದ ಇದರ ವಿಶೇಷವೆಂದರೆ, ಈ ಗಿಡಕ್ಕೆ ಎರಡೇ ಎಲೆಗಳು. ಈ ಎರಡು ಎಲೆಗಳೇ ಗಿಡದ ಜೀವನದುದ್ದಕ್ಕೂ 400-1500 ವರ್ಷಗಳ ಕಾಲ, ಬೆಳೆಯುತ್ತಲೇ ಇರುತ್ತವೆ. ಎಲೆಗಳು 2-4 ಮೀಟರ್ ಉದ್ದಕ್ಕೆ ಬೆಳೆಯುತ್ತವೆ. ಎರಡು ಲಾಡಿಗಳಂತೆ ಬೆಳೆಯುತ್ತಲೇ ಇರುವ ಎಲೆಗಳು ಉದ್ದದಲ್ಲಿ ಬೆಳೆದಂತೆ, ತುದಿಯಲ್ಲಿ ಸೀಳುಗಳಾಗುತ್ತವೆ. ಎಲೆಗಳು 2-4 ಮೀಟರ್ ಉದ್ದಕ್ಕೆ ಬೆಳೆಯುತ್ತವೆ. ಕ್ರಮೇಣ ತುದಿಭಾಗ ಒಣಗಿ ಸಾಯುತ್ತಿರುತ್ತದೆ. ಆದರೆ ಬುಡದಲ್ಲಿ ಬೆಳೆಯುತ್ತಲೇ ಇರುತ್ತವೆ. ಮರುಭೂಮಿಯ ಮರಳಲ್ಲಿ ಬೆಳೆಯುವ ಈ ಗಿಡಕ್ಕೆ ಸೊಕ್ಕಿ ಬೆಳೆದ ಮೂಲಂಗಿ ಅಥವಾ ಬೀಟ್ರೂಟ್ನಂತೆ ಕಾಣುವ ಭೂಗತ ಗಡ್ಡೆಯಿದೆ. ಈ ಗಡ್ಡೆಯ ಅಗಲ ಒಂದು ಮೀಟರ್ ಇದ್ದರೆ ಎತ್ತರ ಒಂದು ಅಡಿಗಿಂತಲೂ ಕಡಿಮೆ. ನೆಲದ ಮೇಲಕ್ಕೆ 5-6 ಸೆ.ಮೀ ಎತ್ತರಕ್ಕಷ್ಟೇ ಬೆಳೆಯುವ ಈ ಕುಬ್ಜ ಸಸ್ಯದ ಚಿರಾಯು ಎಲೆಗಳು ನೆಲದಲ್ಲಿ ಹಬ್ಬಿರುತ್ತವೆ. ಗಿಡದ ಬೇರುಗಳು 2-3 ಮೀಟರ್ ಆಳಕ್ಕೆ ಬೆಳೆಯುತ್ತವೆ. ಇಂತಹ ಅಪರೂಪದ ಸಸ್ಯದ ರಕ್ಷಣೆಗೆ ಅಲ್ಲಿಯ ಸರಕಾರ ಕಾಳಜಿ ವಹಿಸಿದೆ. ಈ ಗಿಡವನ್ನು ನಾಶಪಡಿಸಿದವರು ದೊಡ್ಡ ಮೊತ್ತದ ದಂಡ ಹಾಗೂ ಜೈಲುವಾಸ ಅನುಭವಿಸಬೇಕಾಗುತ್ತದೆ. ಐದು ವರ್ಷಗಳ ಕಾಲ ಮಳೆ ಬೀಳದಿದ್ದರೂ ವೆಲ್ವಿಶ್ಚಯಾ ಗಿಡಗಳು ಸಾಯಲಾರವಂತೆ.....!

ದೈತ್ಯ ಪುಪ್ಪ - ರೆಪ್ಲಿಷಿಯಾ
ಕಾಂಡ ಎಲೆಗಳೆಂಬ ಭಾಗಗಳಿಲ್ಲದಿದ್ದರೂ, ಸಸ್ಯ ಪ್ರಪಂಚದಲ್ಲೇ ಅತಿದೊಡ್ಡ ಹೂಬಿಡುವ ಸಸ್ಯ-ರೆಪ್ಲಿಷಿಯಾ. 1818ರಲ್ಲಿ ರಾಬಟರ್್ ಬ್ರೌನ್ ಎಂಬ ಸಸ್ಯವಿಜ್ಞಾನಿ ಟಿ.ಎಸ್. ರ್ಯಾಫಲ್ಸ್ ಮತ್ತು ಜೆ.ಆರ್ನಾಲ್ಟ್ ಎಂಬುವರ ಜ್ಞಾಪಕಾರ್ಥ ಈ ಗಿಡಕ್ಕೆ ರೆಪ್ಲಿಷಿಯಾ ಆರ್ನಾಲ್ಡಿಯಾಯೈ ಎಂಬ ಹೆಸರಿನ್ನಿತ್ತನು.

ರೆಪ್ಲಿಷಿಯಾ ಒಂದು ಪರಾನ್ನ ಜೀವಿ ಸಸ್ಯ - ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳಲಾರದು. ಕಾಡು ದ್ರಾಕ್ಷಿಬಳ್ಳಿಯ ಬೇರುಗಳಿಂದ ಆಹಾರವನ್ನು ಕಬಳಿಸಿಕೊಳ್ಳುವುದು. ಇದರ ಸಸ್ಯದೇಹವೆಂದರೆ ಶಿಲೀಂಧ್ರದಂತಹ ಸೂಕ್ಷ್ಮ ರೋಮತಂತುಗಳಷ್ಟೇ! ಆದರೆ ಇದು ಬಿಡುವ ಹೂ ಮಾತ್ರ ಸಸ್ಯ ಜಗತ್ತಿನಲ್ಲೇ ದೊಡ್ಡದು. ನೆಲದಡಿಯ ಸೂಕ್ಷ್ಮರೋಮಗಳಿಂದ ದೊಡ್ಡ ಬುಟ್ಟಿಯಂತಹ ಹೂವು ಮಣ್ಣಿನಿಂದ ಮೇಲಕ್ಕೇಳುತ್ತದೆ. ಹೂವಿನ ಸುತ್ತಳತೆ 3 ಮೀಟರ್, ವ್ಯಾಸ ಒಂದು ಮೀಟರ್, ತೂಕ
7 ಕಿಲೋ ಗ್ರಾಂ. ಹೂವಿನ ಮೊಗ್ಗೆ ಆತಿಥೇಯ ಗಿಡದ ಬೇರಿನ ಒಳಗೇ ಬೆಳೆದು, ಬೇರನ್ನು ಒಡೆದು ಹೊರಬರಲು 188 ದಿವಸಬೇಕು. ಅರಳಿ ಹೂವಾಗಲು ಮುಂದೆ 310 ದಿವಸಗಳು. ಹೀಗೆ ಬೆಳೆದು ಅರಳಲು ಸುಮಾರು ಒಂದು ವರ್ಷ ತೆಗೆದುಕೊಂಡ ಹೂವು ನಾಲ್ಕೇ ದಿವಸಗಳಲ್ಲಿ ಬಾಡಿ ಕುಪ್ಪೆಯಾಗುತ್ತದೆ. ದೊಡ್ಡ ಬುಟ್ಟಿಯ ಗಾತ್ರ, ಆಕರ್ಷಕ ಬಣ್ಣದ ಈ ಹೂವಿಗೆ ಮರುಳಾಗಿ ನಾವು ಹತ್ತಿರ ಹೋದರೆ ಮಾತ್ರ ಈ ಹೂವು ಹೊರಸೂಸುವ ಕೊಳೆತ ಮಾಂಸದ ಕೆಟ್ಟವಾಸನೆಯನ್ನು ಸಹಿಸಿಕೊಳ್ಳಬೇಕು. ಹೂ ದೈತ್ಯಗಾತ್ರದ್ದಾದರೂ, ಇದರ ಬೀಜಗಳು ಮಾತ್ರ ಗಸಗಸೆಕಾಳಿನಂತಿವೆ. ಪಶ್ಚಿಮ ವಲಯದ ದಟ್ಟ ಕಾಡುಗಳಿಗಷ್ಟೇ ರೆಪ್ಲಿಷಿಯಾ ಸೀಮಿತಗೊಂಡಿದೆ.

ಊಧ್ರ್ವಮೂಲ ಅಧಃ ಶಾಖಮ್ - ಬೊಬಾಬ್
ಟ್ರಾಫಿಕಲ್ ಆಫ್ರಿಕಾ, ಮಡಗಾಸ್ಕರ್ ಹಾಗೂ ಆಸ್ಟ್ರೇಲಿಯಾಗಳಿಗೆ ಸೇರಿದ ಬೊಬಾಬ್ (ಃಚಿಠಛಚಿಛ) ಮರಗಳ ವೈಜ್ಞಾನಿಕ ಹೆಸರು - ಅಡನ್ಸೋನಿಯಾ ಡಿಜಿಟೇಟಾ. ಕೆಲವರು ಇವುಗಳನ್ನೇ ಕಲ್ಪವೃಕ್ಷಗಳೆಂದು ಹೆಸರಿಸಿದ್ದಾರೆ. ಭರಣಿಯಾಕಾರದ ಈ ಕುಬ್ಜಡೊಳ್ಳು ಮರಗಳ ಗರಿಷ್ಠ ಎತ್ತರ 80 ಅಡಿಗಳಾದರೆ ಕಾಂಡದ ಸುತ್ತಳತೆ 30 ಅಡಿಗಳು. 5-6 ಜನರು ಕೈ ಜೋಡಿಸಿದರೆ ಕಾಂಡವನ್ನು ಆವರಿಸಿಕೊಳ್ಳಬಹುದು. ಭರಣಿಯಂತಹ ಕಾಂಡದ ತುದಿಯಲ್ಲಿ ಮಾತ್ರ ಇರುವ ಶಾಖೋಪಶಾಖೆಗಳು ಎಲೆ ಉದುರಿಸಿ ನಿಂತಾಗ, ತಲೆಕೆಳಗಾದ ಮರದಂತೆ ಕಂಡು ಬರುವುದು.

ಆಫ್ರಿಕಾದ ಒಂದು ಬೊಬಾಬ್ ಮರದ ಸುತ್ತಳತೆ 100 ಅಡಿಗಳು. ಪೂರ್ವ ಜಿಂಬಾಬ್ವೆಯ ಮಾರ್ಗದ ಬದಿಗಳಲ್ಲಿ ಬೆಳೆಯುವ ಈ ಡೊಳ್ಳು ಮರಗಳನ್ನು ಬೆಳೆಯುತ್ತಿದ್ದಂತೆಯೇ ಕೊರೆದು ಬಸ್ ತಂಗು ದಾಣಗಳನ್ನು ನಿಮರ್ಿಸಿದ್ದಾರಂತೆ. ಈ ಮರದ ಇಂತಹ ಪೊಟರೆಗಳಲ್ಲಿ ಸುಮಾರು 40 ಜನ ಮಳೆ, ಬಿಸಿಲು ಗಾಳಿಗಳಿಂದ ರಕ್ಷಣೆ ಪಡೆಯಬಹುದಂತೆ. ತಮಿಳುನಾಡಿನ ಕೆಲವೆಡೆ ಹಾಗೂ ಧಾರವಾಡದ ಸಮೀಪ ಕೆಲವು ಬೊಬಾಬ್ ಮರಗಳನ್ನು ಕಾಣಬಹುದು. ಇವನ್ನು ಅರಬರು ಆಫ್ರಿಕಾದಿಂದ ನೂರಾರು ವರ್ಷಗಳ ಹಿಂದೆ ತಂದು ನೆಟ್ಟರು ಎಂದು ನಂಬಲಾಗಿದೆ.
                                                                                                                        - ಮುಂದುವರೆಯುವುದು . . . .  .

ಆಹಾರ ವಿಹಾರ


ಹಾಗಲಕಾಯಿ ರಾಯತ

ಹಾಗಲಕಾಯಿ ಎಂದರೆ ಮುಖ ತಿರುಗಿಸುವವರೆ ಹೆಚ್ಚು. ಆದರೆ ಆರೋಗ್ಯಕ್ಕೆ ಹಾಗಲಕಾಯಿ ತುಂಬಾ ಮುಖ್ಯ. ಅದರಲ್ಲೂ ಮಧುಮೇಹಿಗಳಿಗೆ ಅತಿ ಅವಶ್ಯಕ. ಹಾಗಲಕಾಯಿಯನ್ನು ಹೆಚ್ಚು ಕಹಿ ಇಲ್ಲದಂತೆ ತಯಾರಿಸಿ ತಿನ್ನಬಹುದಾದ ಈ ಹಾಗಲಕಾಯಿ ರಾಯತವನ್ನು ಮನೆಯಲ್ಲಿ ನೀವೂ ಮಾಡಿ..
ಬೇಕಾಗುವ ಪದಾರ್ಥಗಳು:
* 1 ಕಪ್ ಮೊಸರು
* 1
ಕಪ್ ಕತ್ತರಿಸಿದ ಹಾಗಲಕಾಯಿ
* 1
ಚಮಚ ಜೀರಿಗೆ
* 1
ಚಮಚ ಧನಿಯಾ ಪುಡಿ
*
ಕತ್ತರಿಸಿದ ಹಸಿರು ಮೆಣಸಿನಕಾಯಿ
*
ಎಣ್ಣೆ, ಉಪ್ಪು, ಕೊತ್ತಂಬರಿ

ರಾಯತ ಮಾಡುವ ವಿಧಾನ: ಅಕ್ಕಿ ತೊಳೆದ ನೀರಿನಲ್ಲಿ ಕತ್ತರಿಸಿದ ಹಾಗಲಕಾಯಿಯನ್ನು ಒಂದು ಗಂಟೆ ನೆನೆಸಿಡಬೇಕು. ಇದರಿಂದ ಹಾಗಲಕಾಯಿ ಕಹಿ ಕಡಿಮೆಯಾಗುತ್ತದೆ. ನಂತರ ಬಿಸಿಲಿನಲ್ಲಿ ನೆನೆಸಿದ ಹಾಗಲಕಾಯಿಯನ್ನು ಒಣಗಿಸಿ ಎಣ್ಣೆಯಲ್ಲಿ ಕರಿಯಬೇಕು. ಕರಿದ ಹಾಗಲಕಾಯಿಯ ಮೇಲೆ ಉಪ್ಪನ್ನು ಉದುರಿಸಬೇಕು.
ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಮೊಸರು, ಜೀರಿಗೆ, ಧನಿಯಾಪುಡಿ, ಉಪ್ಪು ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ, ಕೊನೆಗೆ ಎಣ್ಣೆಯಲ್ಲಿ ಕರಿದ ಹಾಗಲಕಾಯಿಯನ್ನು ಹಾಕಿ ಚೆನ್ನಾಗಿ ಕದಡಬೇಕು. ಈಗ ಹಾಗಲಕಾಯಿ ರಾಯತ ತಿನ್ನೋದಕ್ಕೆ ರೆಡಿಯಾಗಿದೆ. ಇದಕ್ಕೆ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಹಾಕಿದರೆ ತಿನ್ನಲು ಬಹಳ ರುಚಿ.

ಕನ್ನಡ ರಾಜ್ಯೋತ್ಸವ 2011


ಪ್ರತಿಸಲದಂತೆ ಈ ಬಾರಿಯೂ ಬೇಸ್ನಲ್ಲಿ ಕನ್ನಡ ರಾಜ್ಯೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ನವೆಂಬರ್ 1 ರ ಮಂಗಳವಾರ ಬೆಳಿಗ್ಗೆ 8:30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ಆಯೋಜಿತವಾಗಿತ್ತು. ಹಿರಿಯ ಅಧ್ಯಾಪಕರಾದ ಶ್ರೀ ವೇಲುರವರಿಂದ ಧ್ವಜಾರೋಹಣ ಕಾರ್ಯ ಪೂರ್ಣಗೊಂಡಿತು. ನಂತರ ನಾಡಗೀತೆಯನ್ನು ಒಟ್ಟಾಗಿ ಹೇಳಲಾಯಿತು. ನಂತರದಲ್ಲಿ ಉಪಸ್ಥಿತರಿದ್ದ ಹಿರಿಯ ಉಪನ್ಯಾಸಕರು ಕನ್ನಡದ ನಡೆ ನುಡಿ ಅಳಿವು ಉಳಿವಿನ ಕುರಿತಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿಕೊಟ್ಟರು. ನಂತರ ಎಲ್ಲರಿಗೂ ಸಿಹಿ ನೀಡಿ ಶುಭಾಷಯ ಕೋರಲಾಯಿತು. ಕಾಯಕ್ರಮದಲ್ಲಿ ಬೇಸ್ ಪರಿವಾರದ ಸುಮಾರು 35 ಮಂದಿ ಹಾಜರಾಗಿದ್ದುದು ಸಂತಸ ತಂದಿತು. 
    ಇನ್ನುಳಿದ ಸದಸ್ಯರು ಹಾಜರಾಗದಿದ್ದುದು ನೋವಿನ ಸಂಗತಿ. ಯಾವುದೇ ರಾಜ್ಯ ಅಥವಾ ದೇಶೋತ್ಸವಗಳಿಗೆ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಹಾಜರಾಗಬೇಕು. ಇದಕ್ಕೆ ಯಾವುದೇ ಆಹ್ವಾನದ ನಿರೀಕ್ಷೆ ಇಟ್ಟುಕೊಳ್ಳಬಾರದು. ಮುಕ್ತ ಮನಸ್ಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಾಲಿರಾಮಚಂದ್ರರಾಯರು ಹೇಳುತ್ತಿದ್ದ ಮತ್ತು ಅವರು ಅಳವಡಿಸಿಕೊಂಡಿದ್ದ, ಅನುಸರಿಸುತ್ತಿದ್ದ ಮಾತುಗಳು ನಮಗೆ ದಾರದೀಪವಾಗಬೇಕು. ಆಗ ಮಾತ್ರ ನಮ್ಮ ನೆಲ, ಭಾಷೆ, ದೇಶ ನಿಜ ಬೆಳಕ ಕಂಡೀತು.
ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ

ಮಿನ್ನಾವು ದೈ ಪೆರತು ಕನ್ನಡದ ಸೇಯಿಂದಧಿಕಮೀ ಜಗರೊಳೆನಗೆ?
ಕನ್ನಡದ ಶಬ್ದಮೆನಗೋಂಕಾರ
ಕನ್ನಡದ ನೆಲದ ನೀವರ್ೊನಲೆ ನಗೆ ದೇವನದಿ
ಕನ್ನಡದ ಪುಲ್ಲೆನಗೆ ಪಾವನ ತುಲಸಿ
ಕನ್ನಡದ ಕಲ್ಲೆನೆಗೆ ಸಾಲಿಗ್ರಾಮ ಶಿಲೆ.


ಏಳ್ಗೆ ಕಣರ್ಾಟಕಂ - ಬಾಳ್ಗೆ ಕಣರ್ಾಟಕಂ - ಆಳ್ಗೆ ಕಣರ್ಾಟಕಂ
ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ - ಸಿರಿಗನ್ನಡಂ ಗಲ್ಲಿ-ಗಲ್ಲಿಗೆ
* * *

Funda Champs


ಬೇಸ್ ತನ್ನದೇ ಆದ ವಿಶಿಷ್ಟ ಮಾರ್ಗಗಳನ್ನು ಅನುಸರಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತಲೇ ಬಂದಿದೆ. ಕಳೆದ ವರ್ಷದಂತೆ ಈ ಬಾರಿಯೂ ಎಫ್.ಎಸ್.ಎನ್.ಟಿ. ವಿಭಾಗದ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರವೊಂದನ್ನು ಆಯೋಜಿಸಿತ್ತು. 

    ಸೆಪ್ಟಂಬರ್ ತಿಂಗಳ 30 ಮತ್ತು ಅಕ್ಟೋಬರ್ 1 ರಂದು ನಡೆದ ಈ ಶಿಬಿರದಲ್ಲಿ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಪ್ರಾಯೋಗಿಕ ಮತ್ತು ಪ್ರಾತ್ಯಕ್ಷಿಕೆಗಳಿಂದ ಕೂಡಿದ್ದ ಈ ಶಿಬಿರದಲ್ಲಿ ಅಧ್ಯಾಪಕರ ಸಲಹೆಯ ಮೇರೆಗೆ ಮಕ್ಕಳೇ ಸ್ವತಃ ಪ್ರಯೋಗಗಳನ್ನು ಮಾಡಿದರು. ವಿದ್ಯಾರ್ಥಿಗಳನ್ನು ವಿವಿಧ ತಂಡಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ತಂಡಕ್ಕೂ ವಿವಿಧ ರೀತಿಯ ಪ್ರಶ್ನೆಗಳು ಮತ್ತು ಸವಾಲುಗಳನ್ನು ಒಡ್ಡಿ ಅದರಲ್ಲಿ ತಂಡದ ಪ್ರತಿಯೊಬ್ಬ ಅಭ್ಯರ್ಥಿಯೂ ಭಾಗವಹಿಸುವಂತೆ ಮಾಡಲಾಯಿತು. ತತ್ಫಲವಾಗಿ ಅಂತ್ಯದಲ್ಲಿ ವಿದ್ಯಾರ್ಥಿಗಳೇ ಕಂಪ್ಯೂಟರ್ ಸಹಾಯದಿಂದ ದೃಶ್ಯಾಧಾರಿತ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 

      ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದು ಇದಕ್ಕೇ ಎನ್ನುವುದನ್ನು ತೋರಿಸುತ್ತಿತ್ತು. ಪ್ರತಿಯೊಂದು ಹಂತದಲ್ಲಿ ಡಿ.ವಿ.ಜಿ. ಯವರು ಹೇಳುತ್ತಿದ್ದ ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು ಎನ್ನುವಂತಹ ವಾಕ್ಯಕ್ಕೆ ಪೂರಕವೆನ್ನುಂತೆ ಈ ಕಾರ್ಯಕ್ರಮ ಯಶಸ್ವಿಯಾಯಿತು.

ಪಠತೋ ನಾಸ್ತಿ ಮೂರ್ಖತ್ವಂ, ಜಪತೋ ನಾಸ್ತಿ ಪಾತಕಮ್ |
ಮೌನಿನಃ ಕಲಹೋ ನಾಸ್ತಿ, ನ ಭಯಂ ಚಾಸ್ತಿ ಜಾಗ್ರತಃ ||

~ * ~ * ~

ಬೆಂದಕಾಳೂರು ವಿಸ್ಮಯ


ಆಧುನಿಕತೆಯ ಪಿತ್ತ ನೆತ್ತಿಗೇರಿ ನಮ್ಮ ಸಾಂಸ್ಕೃತಿಕ ನೆಲೆ, ಪರಂಪರೆ, ಆಚಾರ ವಿಚಾರಗಳು ಕಳೆದುಹೋಗುತ್ತಿರುವ ಮತ್ತು ಎಲ್ಲರ ಪ್ರತಿಷ್ಠೆ, ಸ್ವಾರ್ಥ ಮತ್ತು ಹಣದಾಹೀ ಪ್ರವೃತ್ತಿಗಳೇ ತಾಂಡವವಾಡುತ್ತಿರುವ ಬೆಂಗಳೂರಿನಲ್ಲಿ ಪ್ರತೀ ವರ್ಷವೂ ವಿಸ್ಮಯವೊಂದು ನಡೆಯುತ್ತಲೇ ಇದೆ. ಯಾವುದೇ ವಿದೇಶೀ ಅನುಕರಣೆಯೂ ಇದನ್ನು ಹಿಂದೂಡಲಾಗಿಲ್ಲ. ಇಡೀ ಪ್ರಪಂಚದಲ್ಲಿ ಹುಡುಕಿದರೂ ಇದು ನೋಡಲು ಸಿಗುವುದೂ ಇಲ್ಲ. ಇದು ಏನು ಅಂತ ಯೋಚಿಸ್ತಾ ಇದೀರಾ? ಚುಮು-ಚುಮು ಚಳಿಯ ನಡುವೆ ಎಲ್ಲರನ್ನೂ ರಂಜಿಸುವ ಊರ ಜಾತ್ರೆ ಕಡಲೇಕಾಯಿ ಪರಿಷೆ.

ಕಾಫೀ. . . ಪುರಾಣ




ಬೆಳಿಗ್ಗೆ ಎದ್ದ ತಕ್ಷಣ 80% ಜನರು ಕುಡಿಯುವ ಚಹಾ-ಕಾಫಿಯ ಪುರಾಣ ನಿಮಗೆ ಗೊತ್ತೇ? ಅಷ್ಟಾದಶ ಪುರಾಣಗಳನಂತರ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. ನಭಯಂ ಚಾಸ್ತಿ ಜಾಗೃತಃ ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ. 

ವನವಾಸ - ರಾವಣ - ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ಒಮ್ಮೆ ಹೀಗೆ Evening Walkಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಬೇರಿನ ಆರ್ತನಾದ ಅವನಿಗೆ ಕೇಳಿಸಿತು. ಈಗ ಬೇರು ಎಲ್ಲಿ ಅಳುತ್ತವೆಯೇ ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ ಓ ತರುಲತೆಗಳೇ ಓ ಪಶುಪಕ್ಷಿಗಳೇ.......ಕಂಡಿರಾ ನನ್ನ ಸೀತೆಯನ್ನು?? ಎಂದು ಕೇಳುತ್ತಾ ಹೋಗುತ್ತಾನಂತೆ. ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು, ಗೊತ್ತಾಯ್ತ.  ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು?? ಎಂದು ಕೇಳಿದಾಗ ಆ ಬೇರು ಹೀಗೆಂದಿತು;

ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂಛರ್ೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು. ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ. ರಾಮರಾಜ್ಯದಲ್ಲಿ ಇದು ನ್ಯಾಯವೇ?? ಎಂದು ಕೇಳಿದಾಗ ರಾಮ ಹೇಳಿದ ಎಲೈ ಸಂಜೀವಿನಿಯೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ. ಆದರೆ ನನ್ನ ತಮ್ಮನ ಪ್ರಾಣ ಉಳಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ ಎಂದು ಹರಸಿದ. ಅದರ ಅವತಾರವೇ ನಮ್ಮ ಕಲಿಯುಗದ ಚಹಾ.
ಇನ್ನೂ ಸಂಶಯವೇ?? ನೋಡಿ ಈಗಲೂ ಅಷ್ಟೇ . . ರಾತ್ರಿಯಿಡೀ ಮೂಛರ್ೆ ತಪ್ಪಿದವರಂತೆ ನಿದ್ದೆ ಬಿದ್ದಿರುವ ನಾವು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿದು ಕ್ರಿಯಾಶೀಲರಾಗುವುದಿಲ್ಲವೇ?? ಅದರ ಕರ್ಮಫಲ ಇನ್ನೂ ಬಿಟ್ಟಿಲ್ಲವೋ ಎಂಬಂತೆ ಚಹಾ ಮಾಡಿದ ಬಳಿಕ ಅದರ ಸೊಪ್ಪನ್ನು ಮರದ ಬೇರಿನಡಿ ಬಿಸಾಡುವುದಿಲ್ಲವೇ?? ಅಷ್ಟೇ ಅಲ್ಲ ಸಂಜೀವಿನಿಯನ್ನು ತಂದವನು ಹನುಮಂತ ಯಾವ ಮೂಲಿಕೆ ಎಂದು ತಿಳಿಯದಿದ್ದರೂ ದೂರ ದೃಷ್ಟಿಯಿಂದ ಇಡೀ ಪರ್ವತ ಹೊತ್ತು ತಂದ ಹಾಗೆ ಭಾರತಕ್ಕೆ ಚಹಾ ತಂದವರು ಜೆಮ್ ಶೆಡ್ ಜೀ ಟಾಟಾ. ಅವರು ಫಾರಸೀ ಆಗಿದ್ದರು. ನೋಡಿದಿರಾ?? FAR= ದೂರ SEE = ದೃಷ್ಟಿ. ಹೀಗೆ ಇವರೂ ಕೂಡ ದೂರದೃಷ್ಟಿಯಿಂದಲೇ ಚಹಾವನ್ನು ಭಾರತಕ್ಕೆ ತಂದರು. ಅಲ್ಲದೆ ರಾಮನು ಕಾಡಿನಲ್ಲಿ ಈ ಸೊಪ್ಪಿಗೆ ವರದಾನ ಕೊಟ್ಟಿದ್ದರಿಂದ ಅವರು ತಂದ ಚಹಾಕ್ಕೆ ಕಾನನ ದೇವನ ಚಹಾ (ಕಣ್ಣನ್ ದೇವನ್ ಟೀ) ಅಂದರೆ ಕಾಡಿಗೆ ಹೋಗಿ ಬಂದ ದೇವರನ್ನು ಬದುಕಿಸಿದ ಸೊಪ್ಪು ಎಂಬರ್ಥದಿಂದ ಈ ಹೆಸರು ಕೊಟ್ಟರು.

ಇದು ಚಹಾದ ಪುರಾಣವಾದರೆ ಕಾಫಿ ಇದಕ್ಕೂ ಹಳೆಯದು. ಸಮುದ್ರಮಥನ ಕಾಲದಲ್ಲಿ ಸುರಾಸುರ ಯಕ್ಷ ಗಂಧರ್ವರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿದರು. ಅದರಲ್ಲಿ ಹುಟ್ಟಿದ ಪದಾರ್ಥವನ್ನೆಲ್ಲ ಪರಸ್ಪರ ಹಂಚಿಕೊಂಡರು. ನಡುವೆ ಕಾಲಕೂಟವೆಂಬ ಖತನರ್ಾಕ್ ವಿಷ ಬರಲು ಈಶ್ವರ ಅದನ್ನು bottoms up ಮಾಡಿ ಕುಡಿದ. ನಂತರ ಪೀಯುಷ (ಅಮೃತ) ಹುಟ್ಟಿಕೊಂಡಿತು. ಅಸುರರಿಗೆ ಮೋಹಿನಿಯಿಂದ ಮಂಕುಬೂದಿ ಎರಚಿ ಇನ್ನೇನು ಪೀಯುಷವನ್ನು ಸ್ವರ್ಗಲೋಕಕ್ಕೆ ತೆಗೆದುಕೊಂಡು ಹೋಗುವಾಗ hello excuse me boss ಎಂಬ ಸ್ವರ ಕೇಳಿಸಿತು ತಿರುಗಿ ನೋಡಿದರೆ ಮಾನವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನಾಯ್ತು ಎಂದು ಕೇಳಿದರೆ ಏನು?? ನಮ್ಮ ಭೂಮಿಗೆ ಬಂದು ಸಮುದ್ರ ಮಥಿಸಿ ಸಿಕ್ಕಿದ್ದನ್ನೆಲ್ಲ ದೋಚಿ ಹೋಗ್ತಾ ಇದ್ದೀರಾ?? ನಮ್ಮ ಭೂಮಿ ಬಳಸಿದ್ದೀರ ಬಾಡಿಗೆ ಯಾರು ಕೊಡ್ತಾರೆ?? ನಮಗೂ ಅಮೃತದಲ್ಲಿ ಪಾಲು ಬೇಕು ಎಂದು ಎಲ್ಲರೂ ಜಗಳ ಶುರು ಮಾಡಿದರು. ಆಗ ದೇವರು ಓಹೋ . . ಅಮೃತ ಬೇಕಾ?? ಕಾಲಕೂಟ ಕೂಡ ಅಲ್ಲಿಂದಾನೆ ಬಂದಿದ್ದು ಅದನ್ನೂ ನೀವು ತೆಗೆದುಕೊಳ್ಳಬೇಕು ಎಂದು ವಾದ ಮಾಡಿದರು. ಮನುಷ್ಯರು ಕಾಲಕೂಟದಿಂದ ಹೆದರಿಕೊಂಡರೂ ಪಾಲು ಸಿಗದೇ ಹೋಗಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು.

ಆಮೇಲೆ ದೇವಗುರು ಬೃಹಸ್ಪತಿ, ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮಾಸ್ಟರು ಕುಳಿತು ಒಂದು ಸಂಧಾನಕ್ಕೆ ಬಂದು ಕಾಲಕೂಟದಿಂದ ಕಾ ತೆಗೆದು ಪೀಯೂಷದಿಂದ ಪೀ ತೆಗೆದು ಕಾಫಿ ಮಾಡಿ ಮಾನವರಿಗೆ ಕೊಟ್ಟರು. ಈ ಸಂಧಾನದಲ್ಲಿ ಬೃಹಸ್ಪತಿಗಳು ಸ್ಪಲ್ಪ ಮಾನವರ  for ಆಗಿ ಮಾತನಾಡಿದ್ದರಿಂದ ಅವರ ಸ್ಮರಣಾರ್ಥ ಅವರ ಹೆಸರಿನ ಮೊದಲ ಮೂರು ಅಕ್ಷರ "BRU" ಎಂದು ಇದಕ್ಕೆ ನಾಮಕರಣ ಮಾಡಲಾಯಿತು. ಇದನ್ನು ಕುಡಿದು ಮನುಷ್ಯರಿಗೆ ನಶೆ ಏರಿದ್ದರಿಂದ ಅವರು ಅದನ್ನು ನಶಾಕಾಫಿ ಎಂದು ಅದೇ ಕಲಿಯುಗದ Nescafe ಆಯಿತು. ಹೀಗೆ ಸುರ-ಅಸುರರ ಸಹಕಾರದಿಂದ ಕಾಫಿ ಭೂಮಿಗೆ ಬಂದಿದ್ದರಿಂದ ಇಂದಿಗೂ ಅದನ್ನು ಕುಡಿಯುವಾಗ ನಾವು ಸುರ್ರ್ ರ್ರ್ ರ್ರ್  ಎಂದು ಶಬ್ಧಮಾಡುತ್ತಾ ಅವರನ್ನು ನೆನೆಯುತ್ತೇವೆ. ಉಳಿದ ಪುರಾಣಗಳಲ್ಲಿ ಪೆಪ್ಸಿ ಕೋಲಾಗಳ ಉಲ್ಲೇಖ ಇದೆಯೋ ಎಂದು ಹುಡುಕುತ್ತಿದ್ದೇನೆ. ನಿಮಗೆಲ್ಲಾದರೂ ಏನಾದರೂ ಮಾಹಿತಿ ಸಿಕ್ಕಿದರೆ ತಿಳಿಸಿ.

|| ಅಥ ಶೀ ತಲೆಹರಟೆ ಪುರಾಣಂ ಸಂಪೂರ್ಣಂ ||

ಯಾರ ಮೆಚ್ಚಿಸಲೀ . . . . .!!?. . . !!!



ಹೀಗೆ ಒಮ್ಮೆ ಸೂರ್ಯ, ಭೂಮಿ ಮತ್ತು ಮಳೆರಾಯ ಒಟ್ಟಿಗೆ ಭೇಟಿಯಾದರಂತೆ. ಎಲ್ಲರದ್ದು ಉಭಯಕುಶಲೋಪರಿಯೂ ಆಯಿತು. ನಂತರ ತಂತಮ್ಮ ಭಾವನೆಗಳನ್ನು ತಂತಮ್ಮ ದುಗುಡಗಳನ್ನು ಹಂಚಿಕೊಳ್ಳತೊಡಗಿದರು. ಸಕಲಕೋಟಿ ಜೀವರಾಶಿಗಳಿಗೆ, ಸುತ್ತೇಳು ಲೋಕಗಳಿಗೆ ಬೆಳಕ ನೀಡುವ ಸೂರ್ಯ ತನ್ನ ಮನದ ನೋವನ್ನು ಹೇಳತೊಡಗಿದ:-

ಚಳಿಗಾಲದಲ್ಲಿ ಮರುಗದಿರಲಿ ನಿಮ್ಮ ಸೌಂದರ್ಯ


ಕೆಲವರಿಗೆ ಚಳಿಗಾಲ ಬರುತ್ತಿರುವಾಗಲೆ ಮನೋ ನಡುಕ ಪ್ರಾರಂಭವಾಗುತ್ತದೆ, ಅದು ಚಳಿಯಿಂದಾಗಿ ಅಲ್ಲ ಕಾಲದಲ್ಲಿ ಉಂಟಾಗುವ ತ್ವಚೆ ಸಮಸ್ಯೆಗಳಿಂದ. ಬೇರೆ ಕಾಲದಲ್ಲಿ ತ್ವಚೆ ಸಮಸ್ಯೆ ಉಂಟಾಗುತ್ತಿದ್ದರೂ ಚಳಿಗಾಲದಲ್ಲಿ ತ್ವಚೆಯ ಸಮಸ್ಯೆ ಹೆಚ್ಚಾಗುವುದು. ಅದರಲ್ಲಿ ಚರ್ಮ ಒಡೆಯುವುದು ಒಂದು ಪ್ರಮುಖ ಸಮಸ್ಯೆಯಾಗಿರುತ್ತದೆ.

ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಚಳಿಗಾಲ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

  1. ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಇರಬೇಕಾಗುತ್ತದೆ ಅದಕ್ಕಾಗಿ ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು, ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು.
  2. ಚಳಿಗಾಲದಲ್ಲಿ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನು ಬಳಸಬೇಕು, ಅತಿ ಬೆಚ್ಚಗಿನ ನೀರು ಚರ್ಮಕ್ಕೆ ಒಳ್ಳೆಯದಲ್ಲ, ಮೈಗೆ ಸೋಪು ಕೂಡ ಅತಿ ನೊರೆ ಬರುವ ಹಾಗೆ ಉಜ್ಜುವುದು ಒಳ್ಳೆಯದಲ್ಲ.
  3. ಸ್ನಾನ ಮಾಡುವಾಗ ಚೇರಿ ಅಥವಾ ಸ್ಮ್ರಬ್ಬರ್ ಬಳಸುವುದರಿಂದ ದೇಹಕ್ಕೆ ಫ್ರೆಶ್ ಲುಕ್ ಸಿಗುವುದು. 
  4. ಚಳಿಗಾಲದಲ್ಲಿ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದು ಒಳ್ಳೆಯದು, ವಾರಕ್ಕೊಮ್ಮೆ ಎಣ್ಣೆ ಸ್ನಾನ ಮಾಡುವುದರಿಂದ ಅದು ದೇಹದ ಕಾಂತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
  5. ತುಟಿ ಒಣಗುವುದು ಚಳಿಗಾಲದಲ್ಲಿ ಸಾಮಾನ್ಯ, ಆದ್ದರಿಂದ ತುಟಿಗೆ ಬಾಮ್ ಅಥವಾ ತುಪ್ಪ ಸವರ ಬೇಕು, ಇದರಿಂದ ತುಟಿ ಒಡೆಯುವುದಿಲ್ಲ.


ನಕ್ಕು ನಲಿ

ಕೆಲಸ ಇದ್ದದ್ದೆ  ಸ್ವಲ್ಪ ಹೊತ್ತಾದ್ರೂ ನಗೋಣ. . .  .

ಚಿತ್ರ ಸೌರಭ


















Sunday, 20 November 2011

::ಸ್ಪರ್ಶಿ::

:ಅನಿಸಿಕೆ, ಅಭಿಪ್ರಾಯ, ಪತ್ರೋತ್ತರ: