ಬೇಸ್ ಆರಂಭದಿಂದಲೂ ಮೌಖಿಕ ತರಬೇತಿ ಅಂದರೆ ನೇರ ತರಗತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದರೂ ವಿದ್ಯಾರ್ಥಿಗಳ ಮತ್ತು ಪೋಷಕರ ಒತ್ತಾಸೆಯ ಮೇರೆಗೆ ದೂರಶಿಕ್ಷಣವನ್ನು ಆರಂಭಿಸಿತು. ಸುಮಾರು 15 ವರ್ಷಗಳ ಕಾಲ ಇದೇ ಪದ್ಧತಿಯನ್ನು ನಿರಂತರವಾಗಿ ಅನುಸರಿಸಿತು.
ಕಾಲಕ್ರಮೇಣ ರಾಜ್ಯದ ವಿವಿಧ ಸ್ಥಳಗಳಿಂದ ಬೇಸ್ ತರಗತಿಗಳಿಗಾಗಿ ಬೇಡಿಕೆ ಹೆಚ್ಚಾಗ ತೊಡಗಿತು. ಇದಕ್ಕೆ ಕಾರಣ ಉತ್ತಮ ಉಪನ್ಯಾಕರ ಮತ್ತು ತರಬೇತಿಯ ಕೊರತೆ. ಹಾಗಾಗಿ ದೇಶದ ಅತ್ಯುನ್ನತ ಪ್ರವೇಶ ಪರೀಕ್ಷೆಗಳಿಗೆ ಬೆಂಗಳೂರು ನಗರವನ್ನು ಹೊರತು ಪಡಿಸಿ ಇತರ ವಿದ್ಯಾರ್ಥಿಗಳು ಅಣಿಯಾಗುವುದು ದುಸ್ತರವೆನಿಸಿದ್ದರಿಂದ ಬೇಸ್ಗೆ ತರಬೇತಿಗಾಗಿ ಒತ್ತಡ ಹೆಚ್ಚಾಗ ತೊಡಗಿತು. ಪರಸ್ಥಳಗಳಿಗೆ ಉಪನ್ಯಾಸಕರನ್ನು ನಿತ್ಯವೂ ಕಳುಹಿಸಿಕೊಡುವುದು ಸಾಧ್ಯವಾಗದ ಮಾತು. ಆದ್ದರಿಂದ 2007ರಲ್ಲಿ ಮೊದಲಬಾರಿಗೆ ಅಂತರ್ಜಾಲದ ಸಹಾಯದಿಂದ ತರಗತಿಗಳನ್ನು ಆರಂಭಿಸಲಾಯಿತು. ಇದರ ಸದುಪಯೋಗವನ್ನು ರಾಜ್ಯದ ನಾನಾ ಭಾಗಗಳಲ್ಲಿ ಪಡೆದುಕೊಂಡರು. ಕಾಲಾಂತರದಲ್ಲಿ ತಾಂತ್ರಿಕತೆಯು ಬೆಳೆಯಲಾಗಿ, ಇನ್ನು ಉತ್ತಮ ಸಂವಹನೆಗೆ ಅನುವು ಮಾಡಬೇಕೆಂದು ಉಪಗ್ರಹ ಆಧಾರಿತ ತಂತ್ರಜ್ಞಾನದಿಂದ ವಿಶೇಷ ತಂತ್ರಾಂಶಗಳನ್ನು ಬಳಸಿ ತರಬೇತಿ ಪ್ರಾರಂಭಿಸಲಾಯಿತು. ಇದು ಹೊರರಾಜ್ಯಗಳಿಗೂ ವಿಸ್ತರಿಸಿತು. ಎಲ್ಲ ವಿದ್ಯಾಥರ್ಿಗಳಿಗೂ ತರಗತಿಯ ಬೋಧನಾ ಪ್ರಸಾರ ಸಮರ್ಪಕವಾಗಿ ಸಿಗುವಂತಾಯಿತು.
ಕಳೆದ ಒಂದು ವರ್ಷದಲ್ಲಿ ಅಂತರ್ಜಾಲ ವ್ಯವಸ್ಥೆ ಬೃಹದಾಕಾರವಾಗಿ ಬೆಳೆದು ಇಂದು ಹಳ್ಳಿ ಹಳ್ಳಿಯ ಮೂಲೆ ಮೂಲೆಗೂ ಅದು ವ್ಯಾಪಿಸಿದೆ. ಇದರ ಉಪಯೋಗವನ್ನು ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳೂ ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿರುವ ಹಲವಾರು ವಿದ್ಯಾರ್ಥಿಗಳು ಬೇಸ್ ಕೇಂದ್ರಗಳಿಗೆ ಬಂದು ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ಕಾರಣ ಬಿರುಸಿನ ಮತ್ತು ಅಸಮರ್ಪಕ ಸಂಚಾರ ವ್ಯವಸ್ಥೆ. ಅದಕ್ಕಾಗಿ ವ್ಯಯವಾಗುವ ಸಮಯ ಮತ್ತು ದೇಹಕ್ಕಾಗುವ ಆಯಾಸ ಮತ್ತು ತೊಂದರೆ. ಇಂತಹ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಹೆಚ್ಚು ಸಮಯ ಅನುವು ಮಾಡಿಕೊಡಬೇಕೆಂದು ಆರಂಭವಾದದ್ದೇ ಬೇಸ್@ಹೋಮ್.
ಈ ಮೊದಲೇ ತಿಳಿಸಿದಂತೆ ಅಂತರ್ಜಾಲ ತರಗತಿಗಳು ಬೇಸ್ಗೆ ಹೊಸತೇನಲ್ಲ. ಹೊರದೇಶಕ್ಕೂ ಇಂತಹ ವ್ಯವಸ್ಥೆಯಿಂದಲೇ ತರಗತಿಗಳು ನಡೆಯುತ್ತಿವೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಿಂದಲೇ ಪಾಠಪ್ರವಚನಗಳನ್ನು ಕೇಳಬಹುದು. ಉಪನ್ಯಾಸಕರು ಬೇಸ್ನ ಸಂವಹನ-ಪ್ರಸಾರ ಕೇಂದ್ರದಲ್ಲಿ ಪಾಠವನ್ನು ಮಾಡುತ್ತಿದ್ದರೆ ಅದು ತತ್ಕ್ಷಣದಲ್ಲೇ ವಿದ್ಯಾರ್ಥಿಗಳ ಮನೆಯಲ್ಲಿನ ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತದೆ. ಇಂತಹ ಅವಕಾಶಕ್ಕೆ ಅನುವು ಮಾಡಿಕೊಟ್ಟಿರುವುದು ಇಂದಿನ ವ್ಯವಸ್ಥಿತ ಅಂತರ್ಜಾಲ ವ್ಯವಸ್ಥೆ.
ಇದು ವಿದ್ಯಾರ್ಥಿಗಳಿಗೆ ಸಂಚಾರದಲ್ಲಿ ವ್ಯಯಿಸುವ ಸಮಯವನ್ನು ಉಳಿಸಿದೆ. ಅಲ್ಲದೇ ಈ ಸಮಯವನ್ನು ಸದುಪಯೋಗಮಾಡಿಸುವಲ್ಲಿ ಬೇಸ್@ಹೋಮ್ ಕಾರ್ಯಕ್ರಮ ಸಫಲವಾಗಿದೆ.
ನೂತನ ಶಾಖಾ ಕಛೇರಿಗಳು
ಬೇಸ್ ಅನವರತ ಮಕ್ಕಳ ಭವಿಷ್ಯಕ್ಕಾಗಿ ತನ್ನದೇ ಆದ ವಿಭಿನ್ನ ಮಾರ್ಗಗಳನ್ನು ಉಪಕ್ರಮಿಸುತ್ತಾ ರಾಜ್ಯದ ವಿವಿಧ ಸ್ಥಳಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಖೆಗಳನ್ನು ತೆರೆಯುತ್ತಲೇ ಬಂದಿದೆ. ರಾಜ್ಯದ ಹಲವಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಲೇ ಇದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುವಂತೆ, ಪೋಷಕರಿಗೆ ಮಾಹಿತಿ ಪಡೆಯಲು ಅನುಕೂಲವಾಗಲೆಂಬುದೇ ಇದರ ಉದ್ದೇಶ.
ಬೇಸ್ ಗೆ 20 ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಮಲ್ಲೇಶ್ವರಂ ಮತ್ತು ಜೆ.ಪಿ.ನಗರದಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿದೆ. ಈಗಾಗಲೇ ಈ ಎರಡೂ ಕೇಂದ್ರಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ನಿಮ್ಮ ಆಪ್ತೇಷ್ಠರಿಗೂ ಇದರ ಮಾಹಿತಿ ಕೊಡಿ. ನಿಮ್ಮ ಅನಕೂಲಕ್ಕಾಗಿ ಎರಡೂ ಕೇಂದ್ರಗಳ ವಿಳಾಸ ಇಂತಿದೆ.
ಮಲ್ಲೇಶ್ವರಂ : 'ಸಾಫಲ್ಯ', 41/1ಎ, 13ನೇ ಅಡ್ಡರಸ್ತೆ, 18ನೇ ಮುಖ್ಯರಸ್ತೆ. ( 41400008)
ಜೆ.ಪಿ.ನಗರ : 867, 11ಬಿ ಅಡ್ಡರಸ್ತೆ, 23ನೇ ಮುಖ್ಯರಸ್ತೆ, 2ನೇ ಹಂತ. ( 26595151)
* * *
No comments:
Post a Comment