Sunday, 27 November 2011

ನಕ್ಕು ನಲಿ

ಕೆಲಸ ಇದ್ದದ್ದೆ  ಸ್ವಲ್ಪ ಹೊತ್ತಾದ್ರೂ ನಗೋಣ. . .  .



ಮರಿಗುಂಡ : ನಿನ್ನ ಹಾಲ್ ಟಿಕೆಟ್ ನಂಬರ್ ಏನೋ?
ಮರಿತಿಮ್ಮ : 543210
ಮರಿಗುಂಡ : ನಂಬರ್ ಸಕತ್ತಾಗಿದೆ ಕಣೋ
ಮರಿತಿಮ್ಮ : ಮತ್ತೆ ಸುಮ್ನೆನಾಮ. . ಫ್ಯಾನ್ಸಿ ನಂಬರ್ ಬೇಕಂತ ಬೋರ್ಡ್ ಗೆ   ಸಾವಿರ ರೂಪಾಯಿ ಕೊಟ್ಟಿದೀನಿ ಗೊತ್ತಾ. .


***


ಸೈಕಲ್  ಬ್ರೇಕನ್ನು ಕೈಯಲ್ಲಿ ಹಿಡ್ಕೊಂಡು ಮರಿಗುಂಡ ಡ್ಯಾನ್ಸ್ ಮಾಡ್ತಾ ಇರ್ತಾನೆ. . . .
ಗುಂಡ : ಲೋ. .  ಏನೋ ಮಾಡ್ತಾ ಇದ್ದೀಯಾ?
ಮರಿಗುಂಡ : ಏನಪ್ಪಾ ನೀನು ಅಷ್ಟೋ ಗೊತ್ತಾಗಲ್ವಾ....ಬ್ರೇಕ್ ಡ್ಯಾನ್ಸ್ ಮಾಡ್ತಾ ಇದ್ದೀನಿ.


***


ಗುಂಡ : ನನಗೆ ಗೊತ್ತು ನಿನಗೆ ಚೆನ್ನಾಗಿ ಕನ್ನಡ ಬರುತ್ತೆ ಅಂತಾ . .
ತಿಮ್ಮ  : ಹೌದು ಏನಿವಾಗ?
ಗುಂಡ : ಸರಿ... ನಾರಿ ನುರಿ ಕೋರಿ ತಿರಿ 
ಇದರಲ್ಲಿ ಎಲ್ಲ 'ರಿ' ತೆಗೆದು ಓದು ನೋಡೋಣ...


***


ಕಳ್ಳ ಗುಂಡನ ಮೊಬೈಲ್ ಕಿತ್ಕೊಂಡು ಪರಾರಿ ಆಗ್ತಾನೆ ಆದರೆ ಗುಂಡ ನಕ್ಕೊಂಡೆ ಇರ್ತಾನೆ. ಆಗ
ತಿಮ್ಮ  : ಕಳ್ಳ ಮೊಬೈಲ್ ಕದ್ದು ಓಡ್ತಾ ಇದಾನೆ...ನೀನು ನೋಡಿದ್ರೆ ನಗ್ತಾ ಇದ್ದೀಯಲ್ಲೋ?
ಗುಂಡ : ಓಡ್ಲಿ ಬಿಡೋ, ಮೊಬೈಲ್ ಚಾರ್ಜರ್ ನನ್ಹತ್ರನೆ ಇದೆ. . . !!



***


ಗುಂಡ ಬಲ್ಬ ತೊಗೊಳೋಕೆ ಅಂಗಡಿಗೆ ಹೋಗ್ತಾನೆ
ಗುಂಡ   : ಸ್ವಾಮಿ ಒಂದು ಕಪ್ಪು ಬಲ್ಬ್ ಕೊಡಿ.
ಮಾಲೀಕ : ಕಪ್ಪು ಬಲ್ಬಾ? ಅದನ್ನು ತೊಗೊಂಡು ಏನ್ ಮಾಡ್ತೀರಾ?
ಗುಂಡ : ಮಧ್ಯಾನ್ಹ ನಿದ್ದೆ ಮಾಡ್ಬೇಕು. ಸೂರ್ಯನ ಬಿಸಿಲು ಇರುತ್ತಲ್ಲಾ. ರೂಮ್ ಕತ್ತಲು ಮಾಡೋಣಾಂತ . . . !!

No comments:

Post a Comment