ಪ್ರತಿಸಲದಂತೆ ಈ ಸಲವೂ ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ತತ್ಪ್ರಯುಕ್ತ ಧ್ವಜವಂದನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನವನ್ನು ಸಲ್ಲಿಸಲಾಯಿತು. ಸರಿಯಾಗಿ 8:30ಕ್ಕೆ ಪುಟ್ಟಪುಟ್ಟ ಮಕ್ಕಳಿಂದ ಧ್ವಜಾರೋಹಣವೇರ್ಪಟ್ಟಿತು. ರಾಷ್ಟ್ರಗೀತೆ ಮತ್ತು ದೇಶಗೀತೆ 'ವಂದೇ ಮಾತರಂ' ಎಲ್ಲರೂ ಒಟ್ಟಾಗಿ ಹಾಡುವುದರೊಂದಿಗೆ ಸಾಂಪ್ರದಾಯಿಕ ಕಾರ್ಯಕ್ರಮ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪನ್ಯಾಸಕರಾದ ಶ್ರೀ ವೈ.ಕೆ.ಜೆ, ಶ್ರೀ ಎಚ್.ಎನ್.ಎಸ್. ಮತ್ತಿತರ ಹಿರಿಯರು ಮಾತನಾಡುತ್ತಾ ಹಿರಿಯ ಚೇತನಗಳನ್ನು ನೆನೆದು, ಭ್ರಷ್ಟಾಚಾರದ ಕೂಪದಲ್ಲಿ ನಲುಗುತ್ತಿರುವ ನಮ್ಮ ಭಾರತದ ಮತ್ತು ನಮ್ಮಗಳ ಪರಿಸ್ಥಿತಿಯನ್ನು ವಿವರಿಸುತ್ತಾ ವಿಷಾದ ವ್ಯಕ್ತಪಡಿಸಿದರು. ಶ್ರೀವೇಲುರವರು ಮಾತನಾಡುತ್ತಾ ಬೃಹದ್ಭಂದು ಎಂಬ ದೇಶಭಕ್ತರೊಬ್ಬರ ಕುರಿತು ತಿಳಿಸಿಕೊಟ್ಟರು. ಶ್ರೀ ಚಂದ್ರಶೇಖರ್ ರವರು ತಮ್ಮ ಮನದಾಳದ ನುಡಿಗಳನ್ನು ಹಂಚಿಕೊಂಡರು.
ನಂತರ ಸಿಹಿತಿಂದು ಶುಭಾಷಯ ವಿನಿಮಯ ಮಾಡಿಕೊಳ್ಳಲಾಯಿತು. ಇದೇ ನಾಲ್ಕು ವರ್ಷದ ಹಿಂದೆ ಕೇವಲ 5 ಜನರು ಸೇರುತ್ತಿದ್ದ ಈ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಈ ಬಾರಿ ಸುಮಾರು 40 ಸದಸ್ಯರು ಹಾಜರಿದ್ದುದು ಕಾರ್ಯಕ್ರಮಕ್ಕೆ ಶೋಭೆ ತಂದಿತ್ತು ಮತ್ತು ಆಯೋಜಕರ ಮೊಗದಲ್ಲಿ ಹೆಮ್ಮೆಯ ಭಾವ ಕಾಣುತ್ತಿತ್ತು. ಮುಂಬರುವ ಹಬ್ಬಗಳಿಗೂ ಬೇಸ್ನ ಎಲ್ಲ ಸದಸ್ಯರೂ ಬರುವಂತಾಗಲಿ ಎಂದು ಹಾರೈಸೋಣ.
- BNT
~ * ~
No comments:
Post a Comment