Sunday, 27 November 2011

ಪ್ರತಿಭಾಭಿನಂದನೆ 2011


ಪರೀಕ್ಷೆ ಶಿಕ್ಷೆಯಲ್ಲ - ಮುಂದಡಿಯಿಡಲು ಶ್ರೀರಕ್ಷೆ ಎಂಬ ನಾಣ್ಣುಡಿಯಂತೆ ವೈದ್ಯಕೀಯ, ತಾಂತ್ರಿಕ ಪದವಿ ಪ್ರವೇಶ ಪರೀಕ್ಷೆಗಳ ಮತ್ತು ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಎಲ್ಲೆಡೆಯಿಂದಲೂ ಅಭಿನಂದನೆಗೆ ಭಾಜನರಾಗುತ್ತಾರೆ.


ಪ್ರತಿಬಾರಿಯಂತೆ ಈ ಬಾರಿಯೂ ಬೇಸ್ನಲ್ಲಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು 5ನೇ ಜೂನ್ 2011ರ ಭಾನುವಾರ ಕೋರಮಂಗಲದ ಸೇಂಟ್ಜಾನ್ಸ್ನ ಸಮಾರಂಭ ಸಭಾಂಗಣದಲ್ಲಿ ಏಪರ್ಾಟಾಗಿತ್ತು. ಎಂದಿನಂತೆ ಆಯೋಜನೆಯಲ್ಲಿ ಅಚ್ಚುಕಟ್ಟು, ಸುವ್ಯವಸ್ಥೆ ಮನೆಮಾಡಿತ್ತು.

ಈ ಅಭಿನಂದನಾ ಸಮಾರಂಭಕ್ಕೆ ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯದ ನಿರ್ದೇಶಕರಾದ ಶ್ರೀ ಉಪಾಧ್ಯಾ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (IISc), ಬಾಹ್ಯಾಕಾಶ ವಿಭಾಗದ ಉಪನ್ಯಾಸಕರಾದ ಶ್ರೀ ರಘುನಂದನ್  ರವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಸಂಸ್ಥಾಪಕ ನಿರ್ದೇಶಕರಾದ ಡಾ||ಎಚ್.ಎಸ್.ನಾಗರಾಜ ಮತ್ತು ಉಪನ್ಯಾಸಕರುಗಳಾದ ಶ್ರೀ ವೈ.ಕೆ.ಜಯರಾಮಪ್ಪ ಮತ್ತು ಶ್ರೀ ಕೆ.ಆರ್.ಚಂದ್ರಶೇಖರನ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಪ್ರಾರ್ಥನೆಯೊಂದಿಗೆ ಚಾಲನೆ ಸಿಕ್ಕಿತು. ಉಪನ್ಯಾಸಕರಾದ ಶ್ರೀ ಎಚ್.ಎಸ್.ಮಹದೇವಯ್ಯನವರು ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು. ನಂತರ ಉಪನ್ಯಾಸಕರುಗಳಾದ ಡಾ|| ಎಚ್.ಎನ್.ಸುಬ್ರಹ್ಮಣ್ಯಂ ಮತ್ತು ಡಾ|| ಗೋಪಾಲಕೃಷ್ಣಭಟ್ ರವರುಗಳು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಡಾ||ಎಚ್.ಎಸ್.ಎನ್.ರವರು ಮಾತನಾಡುತ್ತಾ, ಬೇಸ್ ಬೆಳೆದು ಬಂದ ದಾರಿಯನ್ನು ವಿವರಿಸುತ್ತಾ ಈ ಮಟ್ಟಕ್ಕೆ ಬೆಳೆಯಲು ಸಹಕರಿಸಿದ, ಪ್ರೋತ್ಸಾಹಿಸಿದ ಎಲ್ಲರನ್ನೂ ಸ್ಮರಿಸಿದರು. ಕೇವಲ ಮೂರು ವಿದ್ಯಾರ್ಥಿಗಳಿಂದ ಆರಂಭವಾದ ಬೇಸ್ ಕುರಿತು ಹಳೆಯ ಕ್ಷಣಗಳನ್ನು ನೆನಪಿಸಿಕೊಂಡರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ವಿದ್ಯಾಭ್ಯಾಸ ದೊರಕಿಸಿಕೊಡಬೇಕೆಂಬುದು ನಮ್ಮ ಧ್ಯೇಯ ಎಂದರು.

ನಿರ್ದೇಶಕರಾದ ಶ್ರೀ ವಲ್ಲೀಶ್ರವರು ವಾರ್ಷಿಕ ವರದಿಯನ್ನು ವಾಚಿಸಿ, 2011ನೇ ಸಾಲಿನ ಫಲಿತಾಂಶದ ಮಾಹಿತಿಯನ್ನು ನೀಡಿದರು. ಶಿವಮೊಗ್ಗದಲ್ಲಿ ಪ್ರಾರಂಭವಾದ ಶಾಖೆಯ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿನ ಸಂಸ್ಥೆಯ ಗುರಿಯ ಬಗ್ಗೆ ತಿಳಿಸಿದರು. ಕೋರಮಂಗಲದಲ್ಲಿಯೂ ಶಾಖೆಯನ್ನು ತೆರೆಯುವ ಭರವಸೆಯಿತ್ತರು. ಶಿಕ್ಷಕರ ತರಬೇತಿ, ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಇರುವ ವಿಶೇಷ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ನಂತರ ಉತ್ತಮ ಫಲಿತಾಂಶ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು. ಇದನ್ನು ಪಡೆದ ಕೆಲವು ವಿದ್ಯಾಥರ್ಿಗಳು ಬೇಸ್ ಜೊತೆಗಿನ ತಮ್ಮ ಒಡನಾಟವನ್ನು, ಅಭಿಪ್ರಾಯವನ್ನು ಅಲ್ಲಿನ ಸೌಕರ್ಯವನ್ನೂ ತಮ್ಮ ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು. ಪೋಷಕರೂ ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತುಂಬಾ ಸಂತೋಷಗೊಂಡ ಪೋಷಕರೊಬ್ಬರು ಹಾಡುವುದರ ಮೂಲಕ ಧನ್ಯವಾದ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಉಪಾಧ್ಯಾ ಅವರು ವಿಜಯದ, ನಗುಮೊಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ಏನು ಮಾಡಬೇಕೆಂದು ನೀವೇ ನಿರ್ಧರಿಸಿ ಎಂದರು. ಉಪಕಥೆಯನ್ನು ಹೇಳುತ್ತಾ ಗೆಲುವಿನ ಮಾರ್ಗಗಳನ್ನು ತಿಳಿಸುತ್ತಾ ತಾವು ಪರಿಕ್ರಮಿಸಿ ಬಂದ ವಿದ್ಯಾಥರ್ಿದೆಸೆಯ ದಿನಗಳನ್ನು ನೆನೆಸಿಕೊಂಡರು.

ಮತ್ತೊರ್ವ ಅತಿಥಿ ಶ್ರೀ ರಘುನಂದನರವರು ಎಲ್ಲರಿಗೂ ಶುಭಾಷಯ-ಕೋರುತ್ತಾ ಉಪಯುಕ್ತ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಡಾ||ಬಾಲಕೃಷ್ಣರವರು ಎಲ್ಲರಿಗೂ ಧನ್ಯವಾದ ಸಮರ್ಪಣೆ ಮಾಡಿದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಏರ್ಪಾಟಾಗಿತ್ತು.

ಭೋಜನಾ ನಂತರ ಸುಮಾರು 14 ಜನರ ನುರಿತ ಹಾಗೂ ಅನುಭಾವಿ ವ್ಯಕ್ತಿಗಳ ತಂಡದೊಂದಿಗೆ ತಾಂತ್ರಿಕ/ವೈದ್ಯಕೀಯ ಪದವಿಗೆ ಪ್ರವೇಶ ಬಯಸುತ್ತಿರುವ ವಿದ್ಯಾರ್ಥಿಗಳ ಜೊತೆಗೆ ಮುಂದಿರುವ ಅವಕಾಶಗಳ ಬಗ್ಗೆ ಚರ್ಚೆ ಮತ್ತು ಸಂವಾದ ಏರ್ಪಡಿಸಲಾಗಿತ್ತು. ವಿದ್ಯಾರ್ಥಿ ಹಾಗೂ ಪೋಷಕರ ಹಲವಾರು ಪ್ರಶ್ನೆಗಳಗೆ ಉತ್ತರ ನೀಡಿದರು.

ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಮನುಷ್ಯನನ್ನು ನಡೆಸುವುದೋ ಅದೇ ಅವನ ಭವಿಷ್ಯವನ್ನು ನಿರ್ಧರಿಸುವುದು ಎಂಬ ಮಾತು ನಿಜಕ್ಕೂ ಅರ್ಥಪೂರ್ಣ ಅಲ್ಲವೇ . .?

No comments:

Post a Comment