Sunday, 27 November 2011

ಆಹಾರ ವಿಹಾರ


ಹಾಗಲಕಾಯಿ ರಾಯತ

ಹಾಗಲಕಾಯಿ ಎಂದರೆ ಮುಖ ತಿರುಗಿಸುವವರೆ ಹೆಚ್ಚು. ಆದರೆ ಆರೋಗ್ಯಕ್ಕೆ ಹಾಗಲಕಾಯಿ ತುಂಬಾ ಮುಖ್ಯ. ಅದರಲ್ಲೂ ಮಧುಮೇಹಿಗಳಿಗೆ ಅತಿ ಅವಶ್ಯಕ. ಹಾಗಲಕಾಯಿಯನ್ನು ಹೆಚ್ಚು ಕಹಿ ಇಲ್ಲದಂತೆ ತಯಾರಿಸಿ ತಿನ್ನಬಹುದಾದ ಈ ಹಾಗಲಕಾಯಿ ರಾಯತವನ್ನು ಮನೆಯಲ್ಲಿ ನೀವೂ ಮಾಡಿ..
ಬೇಕಾಗುವ ಪದಾರ್ಥಗಳು:
* 1 ಕಪ್ ಮೊಸರು
* 1
ಕಪ್ ಕತ್ತರಿಸಿದ ಹಾಗಲಕಾಯಿ
* 1
ಚಮಚ ಜೀರಿಗೆ
* 1
ಚಮಚ ಧನಿಯಾ ಪುಡಿ
*
ಕತ್ತರಿಸಿದ ಹಸಿರು ಮೆಣಸಿನಕಾಯಿ
*
ಎಣ್ಣೆ, ಉಪ್ಪು, ಕೊತ್ತಂಬರಿ

ರಾಯತ ಮಾಡುವ ವಿಧಾನ: ಅಕ್ಕಿ ತೊಳೆದ ನೀರಿನಲ್ಲಿ ಕತ್ತರಿಸಿದ ಹಾಗಲಕಾಯಿಯನ್ನು ಒಂದು ಗಂಟೆ ನೆನೆಸಿಡಬೇಕು. ಇದರಿಂದ ಹಾಗಲಕಾಯಿ ಕಹಿ ಕಡಿಮೆಯಾಗುತ್ತದೆ. ನಂತರ ಬಿಸಿಲಿನಲ್ಲಿ ನೆನೆಸಿದ ಹಾಗಲಕಾಯಿಯನ್ನು ಒಣಗಿಸಿ ಎಣ್ಣೆಯಲ್ಲಿ ಕರಿಯಬೇಕು. ಕರಿದ ಹಾಗಲಕಾಯಿಯ ಮೇಲೆ ಉಪ್ಪನ್ನು ಉದುರಿಸಬೇಕು.
ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಮೊಸರು, ಜೀರಿಗೆ, ಧನಿಯಾಪುಡಿ, ಉಪ್ಪು ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ, ಕೊನೆಗೆ ಎಣ್ಣೆಯಲ್ಲಿ ಕರಿದ ಹಾಗಲಕಾಯಿಯನ್ನು ಹಾಕಿ ಚೆನ್ನಾಗಿ ಕದಡಬೇಕು. ಈಗ ಹಾಗಲಕಾಯಿ ರಾಯತ ತಿನ್ನೋದಕ್ಕೆ ರೆಡಿಯಾಗಿದೆ. ಇದಕ್ಕೆ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಹಾಕಿದರೆ ತಿನ್ನಲು ಬಹಳ ರುಚಿ.

No comments:

Post a Comment