Sunday, 27 November 2011

ಹೊನ್ನುಡಿ : ಅನುಭಾವಿಯ ಅನುಭವದೊಕ್ಕಣೆ - ವಚನಾಮೃತ


ನಿಜವಾದ ಲಕ್ಷ್ಮಿ ಸರಸ್ವತಿವೊಲಿದರೆ ಕುಲವನರಸಲದೇಕೆ
ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೇ
ಕಾಮಧೇನು ಮನೆಯಲಿರಲು ಬೇರೆಹಯನರಸಲೇಕೆ?
ಮೋಹವುಳ್ಳ ಠಾವಿಯಲ್ಲಿ ಲಜ್ಜೆಯನರಸಲದೇಕೆಯೇ
ಮಹಾದಾನಿ ಕೂಡಲ ಸಂಗಯ್ಯನೊಲಿದು
ಮಾದಾರ ಚೆನ್ನಯ ಮನೆಯಲುಂಡು
ವೇದವನೋದಿದವರು ಲಿಂಗದೇವನೊಲಿಸಿ ತೋರಿರೊ?
- ಬಸವಣ್ಣ



ಒಳ್ಳೆಯ ವ್ಯಕ್ತಿಗೆ ಲಕ್ಷ್ಮಿ ಮತ್ತು ಸರಸ್ವತಿ ಇಬ್ಬರೂ ಒಲಿದಿರುವಾಗ ಅವನ  ಕುಲದ ಬಗ್ಗೆ ಏಕೆ ಚಿಂತಿಸುವುದು? ಲಿಂಗದೇವನು ಒಲಿದ ಮೇಲೆ ಅವನಿಗೆ ಬೇರೆ ಮಂತ್ರವೇಕೆ. ಕಾಮಧೇನು ಕೇಳಿದ್ದನ್ನು ಕೊಡುವ ಸುರಧೇನುವಿದ್ದಾಗ ಬೇರೆ ಹಾಲು ಮೊಸರು ಇತ್ಯಾದಿಗಳ ಬಗ್ಗೆ ಚಿಂತೆಯೇಕೆ? ಪರಿಶುದ್ಧವಾದ ಪ್ರೀತಿಯಿರುವಲ್ಲಿ ನಾಚಿಕೆಯನ್ನು ಏಕೆ ಹುಡುಕುವುದು? ಮಹಾದಾನಿಯೆನಿಸಿದ ಲಿಂಗದೇವನು ಒಲಿದು ಮಾದಾರ ಚೆನ್ನಯ್ಯನ ಮನೆಯಲ್ಲಿ ಊಟವ ಮಾಡಿದನೆಂದರೆ ಜಾತಿಯ ಬಗ್ಗೆ ವಿವರಣೆ ಏಕೆ ಬೇಕು? ವೇದಗಳನ್ನು ಓದಿದವರು ಲಿಂಗದೇವನನ್ನು ತೋರಿಸುವಿರಾ? ಎಂದು ಪರಮಾತ್ಮನನ್ನು ಒಲಿಸಿದ ಭಕ್ತನಲ್ಲಿ ಮತ್ತೆ ಕುಲದ ಬಗ್ಗೆ ವಿಚಾರ ಮಾಡುವದು ಸರಿಯಲ್ಲವೆಂದು ತಿಳಿಸುತ್ತ ಬಸವಣ್ಣನವರು ಭಕ್ತಿಯಲ್ಲದೇ ವೇದ, ಶಾಸ್ತ್ರ ಪಾಂಡಿತ್ಯದಿಂದ ಲಿಂಗದೇವನನ್ನು ಕಾಣಲಾಗದು ಎಂದಿದ್ದಾರೆ.

ಪರಮಾತ್ಮನನ್ನು ಕಾಣಲು ಭಕ್ತಿ ಮುಖ್ಯ - ಪಾಂಡಿತ್ಯವಲ್ಲ ; ಅದು ಕೇವಲ ದಾರಿಯಷ್ಟೆ.

No comments:

Post a Comment