ಎರಡು ಬೀಜಗಳು ಹೇಗೋ ಎಂತೋ ಸತ್ವಪೂರ್ಣ ಮಣ್ಣಿನಡಿ ಸೇರಿಹೋದವು. ಕೆಲ ದಿನಗಳ ನಂತರ ಒಂದು ಬೀಜಕ್ಕೆ ಮೊಳೆಯುವ, ಬೆಳೆಯುವ ಇಚ್ಛೆಯಾಯಿತು. ಅದು ಎರಡನೆಯ ಬೀಜವನ್ನು ಕುರಿತು ಹೇಳಿತು. ನನಗೆ ಬೆಳೆಯಬೇಕೆನಿಸುತ್ತಿದೆ. ನನ್ನ ಬೇರುಗಳನ್ನು ಈ ಮಣ್ಣಿನಾಳಕ್ಕೆ ಇಳಿಸಿ, ನನ್ನ ಚಿಗುರುಗಳನ್ನು ಮಣ್ಣಿನಿಂದ ಮೇಲಕ್ಕೆ ಎತ್ತಿ ಕಳುಹಿಸಿ, ಆಹಾ! ನನ್ನ ಎಳೆಯ ಹಸಿರು-ಹಸಿರಾದ ಚಿಗುರುಗಳು ವಸಂತನ ಆಗಮನವನ್ನು ಸಾರುವ ಪತಾಕೆಗಳಂತೆ ಕಾಣುವುದು ಎಂಥಾ ಆಹ್ಲಾದಕರ ಅನುಭವ. ಸೂರ್ಯನ ಎಳೆಯ ಕಿರಣಗಳು ನನ್ನ ಮೇಲೆ ಮುದುಡಿ ಮಲಗಿರುವ ಇಬ್ಬನಿಯ ಹನಿಗಳನ್ನು ಮುತ್ತಿಡುವಾಗ ಆಗುವ ಸಂತೋಷಕ್ಕೆ ಸಾಟಿ ಇರದು.
Sunday, 27 November 2011
ಕನ್ನಡ ಭಗವದ್ಗೀತೆ (ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗ ಶ್ರೇಣಿ)
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು ?|
ಒರಟು ಕೆಲಸವೊ ಬದುಕು - ಮಂಕುತಿಮ್ಮ
Saying this didn’t work out right, this is not right, don’t
Spread thorns on your bed. What if something is
Missing, what if something else is in excess?
Life is rough work – Dim tim
ಹೊನ್ನುಡಿ : ಅನುಭಾವಿಯ ಅನುಭವದೊಕ್ಕಣೆ - ವಚನಾಮೃತ
ನಿಜವಾದ ಲಕ್ಷ್ಮಿ ಸರಸ್ವತಿವೊಲಿದರೆ ಕುಲವನರಸಲದೇಕೆ
ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೇ
ಕಾಮಧೇನು ಮನೆಯಲಿರಲು ಬೇರೆಹಯನರಸಲೇಕೆ?
ಮೋಹವುಳ್ಳ ಠಾವಿಯಲ್ಲಿ ಲಜ್ಜೆಯನರಸಲದೇಕೆಯೇ
ಮಹಾದಾನಿ ಕೂಡಲ ಸಂಗಯ್ಯನೊಲಿದು
ಮಾದಾರ ಚೆನ್ನಯ ಮನೆಯಲುಂಡು
ವೇದವನೋದಿದವರು ಲಿಂಗದೇವನೊಲಿಸಿ ತೋರಿರೊ?
- ಬಸವಣ್ಣ
ಪ್ರತಿಭಾಭಿನಂದನೆ 2011
ಪರೀಕ್ಷೆ ಶಿಕ್ಷೆಯಲ್ಲ - ಮುಂದಡಿಯಿಡಲು ಶ್ರೀರಕ್ಷೆ ಎಂಬ ನಾಣ್ಣುಡಿಯಂತೆ ವೈದ್ಯಕೀಯ, ತಾಂತ್ರಿಕ ಪದವಿ ಪ್ರವೇಶ ಪರೀಕ್ಷೆಗಳ ಮತ್ತು ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಎಲ್ಲೆಡೆಯಿಂದಲೂ ಅಭಿನಂದನೆಗೆ ಭಾಜನರಾಗುತ್ತಾರೆ.
ಮೂರರ ಶ್ರೇಷ್ಠತೆ
ಈ ಮೂರಲ್ಲಿ ಸಂಶಯ ಪಡಬೇಡ
-ಅರ್ಧಾಗಿ, ಸ್ನೇಹಿತ, ಆಳು, ಪ್ರೀತಿ, ಸ್ನೇಹ,
ಈ ಮೂವರಿಗೆ ದಾರಿ ತೋರಿಸು
-ವಿಧವೆ, ಕುರುಡ, ಅನಾಥ
ಈ ಮೂರನ್ನು ಅವಶ್ಯ ಪಡೆ
BASE@Home
ಬೇಸ್ ಆರಂಭದಿಂದಲೂ ಮೌಖಿಕ ತರಬೇತಿ ಅಂದರೆ ನೇರ ತರಗತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದರೂ ವಿದ್ಯಾರ್ಥಿಗಳ ಮತ್ತು ಪೋಷಕರ ಒತ್ತಾಸೆಯ ಮೇರೆಗೆ ದೂರಶಿಕ್ಷಣವನ್ನು ಆರಂಭಿಸಿತು. ಸುಮಾರು 15 ವರ್ಷಗಳ ಕಾಲ ಇದೇ ಪದ್ಧತಿಯನ್ನು ನಿರಂತರವಾಗಿ ಅನುಸರಿಸಿತು.
ಸ್ವಾತಂತ್ರೋತ್ಸವ 2011
ಪ್ರತಿಸಲದಂತೆ ಈ ಸಲವೂ ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ತತ್ಪ್ರಯುಕ್ತ ಧ್ವಜವಂದನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನವನ್ನು ಸಲ್ಲಿಸಲಾಯಿತು. ಸರಿಯಾಗಿ 8:30ಕ್ಕೆ ಪುಟ್ಟಪುಟ್ಟ ಮಕ್ಕಳಿಂದ ಧ್ವಜಾರೋಹಣವೇರ್ಪಟ್ಟಿತು. ರಾಷ್ಟ್ರಗೀತೆ ಮತ್ತು ದೇಶಗೀತೆ 'ವಂದೇ ಮಾತರಂ' ಎಲ್ಲರೂ ಒಟ್ಟಾಗಿ ಹಾಡುವುದರೊಂದಿಗೆ ಸಾಂಪ್ರದಾಯಿಕ ಕಾರ್ಯಕ್ರಮ ಪ್ರಾರಂಭವಾಯಿತು.
ಶರನ್ನವರಾತ್ರಿ - ಆಯುಧಪೂಜಾ
ಶರದ್ರುತುರಾಜನು ಬಂತೆಂದರೆ ದೇಶದೆಲ್ಲಡೆ ನವರಾತ್ರಿ-ದಸರೆಯ ಸಡಗರವೋ ಸಡಗರ. ಇದು ಭೂಮಿಯ ಹಬ್ಬ. ಯುಗಾದಿಯು ಕಲಿಯುಗದ ಆದಿಯಾದರೆ, ನವರಾತ್ರಿ ಈ ಧರೆಯ ಆದಿಯೆಂದು ಪ್ರತೀತಿ ಇದೆ. ಅಂತಹ ನವರಾತ್ರಿಯಲ್ಲಿ ಆಯುಧಪೂಜೆಗೆ ಹೆಚ್ಚು ಪ್ರಾಶಸ್ತ್ಯ. ಇದು ಯಾವುದೇ ವರ್ಗಕ್ಕೆ, ಕುಟುಂಬಕ್ಕೆ ಸೀಮಿತವಾಗಿರದೆ ಎಲ್ಲರೂ ತಾವು ನಿತ್ಯವೂ ಬಳಸುವ ಆಯುಧಗಳಿಗೆ ಪೂಜಿಸುವ ಹಬ್ಬ. ಯಂತ್ರೋಪಕರಣಗಳು, ವಿದ್ಯುನ್ಮಾನ ಸಲಕರಣೆಗಳು, ನಿತ್ಯವೂ ಬಳಸುವ ಆಯುಧಗಳು, ವಾಹನಗಳು ಇತ್ಯಾದಿ ಹೀಗೆ ಹತ್ತು ಹಲವು ಬಗೆಬಗೆ ಆಯುಧಗಳನ್ನು ಶುಭ್ರಗೊಳಿಸಿ ಭಕ್ತಿಯಿಂದ ಎಲ್ಲವೂ ಶುಭವಿದ್ದು ಮುಂದೆಯೂ ಸುಖತರಲೆಂದು ಪ್ರಾರ್ಥಿಸುವ ಹಬ್ಬ.
ಪ್ರಥಮ ಬಹುಮಾನಿತ ಲೇಖನ
: ಉದ್ಯೋಗಸ್ಥ ಪುರುಷ :
ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿನ ಪಾತ್ರ
ಯಾವುದೇ ಕುಟುಂಬದಲ್ಲಿ ಮಕ್ಕಳ ಪಾಲನೆ ಪೋಷಣೆಯ ಮಹತ್ತರವಾದ ಜವಾಬ್ದಾರಿ ಆ ಮಕ್ಕಳ ಪೋಷಕರದ್ದು. ಪೋಷಕರು ಎಂದೊಡನೆ ತಂದೆ ತಾಯಿ ಇಬ್ಬರೂ ಒಳಗೊಂಡಿರುತ್ತಾರೆ. ಹಿಂದಿನ ಕಾಲದಲ್ಲಾದರೆ, ತಾಯಿಯಾದವಳು ಸಾಮಾನ್ಯವಾಗಿ ಮನೆಯಲ್ಲೇ ಇರುತ್ತಿದ್ದರಿಂದ ಮತ್ತು ಕುಟುಂಬದ ಹಿರಿಯರ ಸಹಾಯದಿಂದ ಚಿಕ್ಕ ಮಕ್ಕಳ ಪಾಲನೆ ಪೋಷಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಳು. ತಂದೆಯಾದವನು ಬಿಡುವಿನ ವೇಳೆಯಲ್ಲಿ ತನ್ನ ಮಕ್ಕಳ ಯೋಗಕ್ಷೇಮದ ಬಗ್ಗೆ, ಅವರ ಆಟಪಾಠಗಳ ಬಗ್ಗೆ ಹಿತ ಚಿಂತನೆ ಮಾಡುತ್ತಿದ್ದರೆ ಸಾಕಿತ್ತು. ಹಾಗಿದ್ದ ಪಕ್ಷದಲ್ಲೂ ಅಂದಿನ ದಿನಗಳಲ್ಲಿ ತಂದೆಯಾದವನು ತನ್ನ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ಜವಾಬ್ದಾರಿ ತೋರಿಸುತ್ತಿದ್ದನು.
ಮಾಸದ ವ್ಯಕ್ತಿ
ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ
ಕನ್ನಡದ ಸುಪ್ರಸಿದ್ಧ ಹಾಗೂ ಜನಪ್ರಿಯ ಕವಿಗಳಲ್ಲಿ ಒಬ್ಬರಾಗಿ, ಆಡಳಿತಾತ್ಮಕ ದಕ್ಷತೆ ಮತ್ತು ದೂರದೃಷ್ಟಿ ಹಾಗೂ ಸಾಹಿತ್ಯಕ ಸೃಜನಶೀಲತೆ ಮತ್ತು ಸಹೃದಯತೆಯ ಸಂಗಮವಾಗಿರುವ, ಕಾವ್ಯೋಪಾಸನೆಯ ವ್ರತಸ್ಥ ಚೇತನ; ಯುವ ಮನಸ್ಸಿನ ಕುತೂಹಲ ಮತ್ತು ಅನ್ವೇಷಣಗಳು ಸೌಂದರ್ಯನಿಷ್ಠ ಸ್ಪಂದನಗಳೊಂದಿಗೆ ಚಿಂತನಶೀಲ ವಿವೇಚನಾ ಶಕ್ತಿಯನ್ನು ಮೈಗೂಡಿಸಿಕೊಂಡು, ಪ್ರಕೃತಿ ಪ್ರೇಮವನ್ನೂ ಜಾಗೃತವಾಗಿರಿಸಿಕೊಂಡು ಬದುಕಿನ ವಿವಿಧ ಸ್ತರಗಳನ್ನು ಅವಲೋಕಿಸುತ್ತ ಹಾಗೂ ಅನುಭವಿಸುತ್ತ ಕಾವ್ಯಶಿಲ್ಪದಲ್ಲಿ ಒಂದು ಪರಿಣಿತಿಯ ಹಂತಕ್ಕೆ ಬಂದ, ಯುಗಯುಗಾಂತ್ಯದವರೆಗೆ ಜಗವ ಬೆಳಗಿಸಬಲ್ಲ ಚಿರಂತನ ಚೆನ್ ಬೆಳಕನ್ನು ಕಂಡ ಕವಿ ಶ್ರೀ ಚೆನ್ನವೀರಕಣವಿ
1928 ಜೂನ್ 28 ರಂದು ಗದಗಿನ ಹೊಂಬಳದಲ್ಲಿ ಪಾರ್ವತಮ್ಮ ಮತ್ತು ಸಕ್ರೆಪ್ಪನವರ ಕಿರಿಯ ಮಗನಾಗಿ ಕಣವಿಯವರ ಜನನ. ಕಿರಿಯ ಮಗನಾಗಿ ಜನಿಸಿದ ಇವರಿಗೆ ಇಟ್ಟ ಹೆಸರು 'ಚೆನ್ನವೀರ' ಎಂಬುದು. ಇದು ಸಕ್ರೆಪ್ಪ ಮಾಸ್ತರರ ದೀಕ್ಷಾಗುರುಗಳ ಹೆಸರು. ಕಣವಿಯವರ ತಂದೆ ಸಕ್ರೆಪ್ಪನವರು ಶಿರುಂದದಲ್ಲಿ ಶಾಲಾ ಶಿಕ್ಷಕರಾಗಿದ್ದರು. ಆ ಕಾಲದಲ್ಲಿ ಅದು ಅತ್ಯಂತ ಗೌರವಾನ್ವಿತವಾದ ವೃತ್ತಿ. ಕಣವಿ ಸಕ್ರೆಪ್ಪ ಮಾಸ್ತರರು ಪ್ರಭಾವೀ ಶಿಕ್ಷಕರು. ಜೊತೆಗೆ ಧ್ಯಾನ, ಪ್ರಾರ್ಥನೆಗಳಂಥ ಆಧ್ಯಾತ್ಮಿಕ ಸಾಧನೆಯಲ್ಲಿಯೂ ಅವರು ತೊಡಗಿದವರು. ಕಣವಿಯವರು ತಮ್ಮ ಶೈಶವ ಮತ್ತು ಬಾಲ್ಯಗಳನ್ನು ಕಳೆದದ್ದು ಶಿರುಂದದಲ್ಲಿ; ಅದು ಒಂದು ಸಣ್ಣಹಳ್ಳಿ. ಓರಗೆಯ ಬಾಲಕರೊಂದಿಗೆ ಬೆರೆತು ಗುಂಡು, ಚೆಂಡು, ಬುಗುರಿ ಮೊದಲಾದ ಆಟಗಳನ್ನು ಆಡುತ್ತಿದ್ದ ಕಣವಿಯವರಿಗೆ ಅಲ್ಲಿಯ ಪರಿಸರ ಕುತೂಹಲವನ್ನು ಕೆರಳಿಸುತ್ತ, ಮನಸ್ಸನ್ನು ಉಲ್ಲಸಿತಗೊಳಿಸುತ್ತ, ಅವರ ಸೃಜನಶೀಲ ಶಕ್ತಿಯನ್ನು ಜಾಗೃತಗೊಳಿಸುತ್ತ, ವಿಲಕ್ಷಣವಾದ ಹೊಳಹುಗಳನ್ನು ಒಳಗೊಳಗೆ ಮೂಡಿಸುತ್ತ ಬೆಳಿಸಿತು. ಕಮ್ಮಾರ ಮಾನಪ್ಪನ ಕೆಂಗುಲಿಮೆ, ಕುಂಬಾರ ಮಲ್ಲಣ್ಣನ ತಿಗುರಿ ಅವರನ್ನು ಬೆರಗುಗೊಳಿಸುತ್ತಲೇ, ಹೊಸ ಸೃಷ್ಟಿಯ ಕ್ರಿಯಾತ್ಮಕ ಸಂವೇದನೆಗಳನ್ನು ನೀಡಿವೆ. ಕಣವಿಯವರು ಈ ಬಾಲ್ಯದ ದಿನಗಳಲ್ಲಿಯೇ ಆಟ, ಬಯಲಾಟ ಕಂಡಿದ್ದಾರೆ, ಕೋಲುಕುಣಿತ ನೋಡಿದ್ದಾರೆ. ಹಂತಿ (ಧಾನ್ಯಗಳನ್ನು ಒಕ್ಕುವಾಗ ಕಟ್ಟುವ ದನಗಳ ಸಾಲು) ತಿರುಗುವುದನ್ನು
Subscribe to:
Posts (Atom)
