:ಅನಿಸಿಕೆ, ಅಭಿಪ್ರಾಯ, ಪತ್ರೋತ್ತರ:
ಗುರುಕುಲ ಮಾಹಿತಿಪೂರ್ಣ ಲೇಖನ ಚೆನ್ನಾಗಿ ಮೂಡಿಬಂದಿದೆ. ಎಷ್ಟೋ ವಿಚಾರಗಳು ನಮಗೆ ತಿಳಿದೇ ಇರಲಿಲ್ಲ. ಈ ಮುಂಚೆ ವರ್ಷದಲ್ಲಿ ಹಲವಾರು ಬಾರಿ ಎಲ್ಲರೂ ಒಂದೆಡೆ ಸೇರುತ್ತಿದ್ದೆವು ವಿಚಾರ ವಿನಿಮಯ ಆಗ್ತಾ ಇತ್ತು ಈಗ ಅದು ಇಲ್ಲದಾಗಿದೆ. ಮತ್ತೆ ಅದೇ ರೀತಿ ಆಗಿಂದ್ದಾಗೆ ಎಲ್ಲರೂ ಒಂದಡೆ ಸೇರುವಂತಾಗಬೇಕು. ದಯಮಾಡಿ ಬೇಸ್ ಆರಂಭಿಸುವ ಹೊಸ ಹೊಸ ಕೋರ್ಸುಗಳ ಬಗ್ಗೆ ನೀವಾದರೂ ಪತ್ರಿಕೆಯಲ್ಲಿ ವಿಸ್ತಾರವಾಗಿ ಪ್ರಕಟಿಸಿ.
- ಹಲವಾರು ಮನಗಳು
- ಹಲವಾರು ಮನಗಳು
ಸಂ: ಚಿತ್ರಗಳನ್ನಾದರೂ ಬಣ್ಣದಲ್ಲಿ ಮುದ್ರಿಸಬೇಕೆಂಬ ಹಂಬಲ ನಮಗೂ ಇದೆ. ಆದರೆ ಕೆಲವು ಆಂತರಿಕ ಕಾರಣಗಳು ಇದಕ್ಕೆ ಅಡ್ಟಿಯಾಗಿವೆ. ಆದರೆ ಚಿಂತಿಸಬೇಡಿ ಸೌರಭದ ಬ್ಲಾಗ್ ಸಿದ್ಧಗೊಂಡಿದೆ. ಅಲ್ಲಿ ನಿಮ್ಮ ಆಸೆ ಪೂರೈಸುತ್ತೇವೆ. ಬ್ಲಾಗ್ ಮಾಹಿತಿ ಇದೇ ಸಂಚಿಕೆಯ ಪುಟಗಳಲ್ಲಿದೆ.
ಅರಿಕೆ:

ಸಂ: ಖಂಡಿತವಾಗಿಯೂ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಪೂರಕ ಮಾಹಿತಿಯನ್ನು ಪ್ರಚುರಪಡಿಸಲು ಪ್ರಯತ್ನಿಸುತ್ತೇವೆ.
'ಬಾಯಿಲ್ಲದವರು', 'ನಕ್ಕುನಲಿ', 'ಮೊಬೈಲ್ ಹನಿ' ಸೂಪರ್ರಾಗಿದೆ. 'ಬೆಟ್ಟಿಂಗ್ ಬೆಟ್ಟಿಂಗ್' ಸುದ್ದಿ ತಿಳಿದು ಬೇಸರವಾಯಿತು. ಬೇಸ್ ಹೊರತಾಗಿ ಹೊರಗಡೆ ಯಾರೋ ಪುಂಡ ಪೋಕರಿಗಳು ಮಾಡಿರುವ ವಿಚಾರ ಬಹಳ ನೋವಿನ ಸಂಗತಿ; ನಮ್ಮ ಬಡಾವಣೆಗಳಲ್ಲೂ ಇದೇ ರೀತಿ ನಡೆಯಿತು. ಆದರೆ ನಮ್ಮ ಬೇಸ್ನಲ್ಲೂ ಇದರ ಗಾಳಿ ಬೀಸಿತ್ತು ಅಂದರೆ ಬಹಳ ವಿಷಾದನೀಯ.
ಪತ್ರಿಕೆಯಲ್ಲಿ ಮೂಡಿರುವ ಚಿತ್ರಗಳೂ ಚೆನ್ನಾಗಿವೆ. ಇವನ್ನಾದರೂ ಬಣ್ಣಬಣ್ಣದಲ್ಲಿ ಪ್ರಕಟಿಸಬಹುದೇ?- ಹಲವಾರು ಮನಗಳು
ಸಂ: ಚಿತ್ರಗಳನ್ನಾದರೂ ಬಣ್ಣದಲ್ಲಿ ಮುದ್ರಿಸಬೇಕೆಂಬ ಹಂಬಲ ನಮಗೂ ಇದೆ. ಆದರೆ ಕೆಲವು ಆಂತರಿಕ ಕಾರಣಗಳು ಇದಕ್ಕೆ ಅಡ್ಟಿಯಾಗಿವೆ. ಆದರೆ ಚಿಂತಿಸಬೇಡಿ ಸೌರಭದ ಬ್ಲಾಗ್ ಸಿದ್ಧಗೊಂಡಿದೆ. ಅಲ್ಲಿ ನಿಮ್ಮ ಆಸೆ ಪೂರೈಸುತ್ತೇವೆ. ಬ್ಲಾಗ್ ಮಾಹಿತಿ ಇದೇ ಸಂಚಿಕೆಯ ಪುಟಗಳಲ್ಲಿದೆ.
ಅರಿಕೆ:
ಆತ್ಮೀಯ ಓದುಗರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯಮಾಡಿ ಪತ್ರಮುಖೇನ ಅಥವಾ ಇ-ಮೈಲ್ ಮೂಲಕ ಕಳುಹಿಸಿಕೊಡಿ. ನೀವು ನೇರಬಂದು ಬಾಯ್ಮಾತಿನಲ್ಲಿ ಹೇಳಿದಾಗ ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು ಕಷ್ಟಸಾಧ್ಯವಾದೀತು. ಹಾಗಂದ ಮಾತ್ರಕ್ಕೆ ಹೇಳಬಾರದಂತಲ್ಲ. ಪತ್ರಮುಖೇನ ಸಂಪಾದಕರ/ಉಪಸಂಪಾದಕರ ಬಳಿಯಲ್ಲಿ ಕೊಟ್ಟರೆ ಅನುಕೂಲವಾದೀತು ಅಥವಾ basesourabha@gmail.com ಗೆ ಇ-ಮೈಲ್ ಮಾಡಬಹುದು.
No comments:
Post a Comment